ಮಡಿಕೇರಿ, ಡಿ. 7: ಹುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕವಾಗಿ ಇದಕ್ಕೆ ಮುನ್ನ ಆಚರಿಸಲ್ಪಡುವ ‘ಪುತ್ತರಿ ಈಡ್’ ಕಾರ್ಯ ಮಡಿಕೇರಿ ಕೊಡವ ಸಮಾಜದ ವತಿಯಿಂದ ಇಂದು ಸಂಜೆಯಿಂದ ನಗರದ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಮಂದ್‍ನಲ್ಲಿ ಆರಂಭಗೊಂಡಿತು. ತಾ. 8 ಹಾಗೂ 9 ರಂದು ಸಂಜೆ ಕೂಡ ಈ ಕಾರ್ಯ ಮುಂದುವರಿಯಲಿದೆ.