ಪೆರಾಜೆ, ಡಿ. 7: ಪ್ರೀತಿ ಕಲ್ಲಪಳ್ಳಿ ಯುವಕಮಂಡಲದ ಆಶ್ರಯದಲ್ಲಿ ಕೇರಳದ ಕಲ್ಲಪಳ್ಳಿಯಲ್ಲಿ ನಡೆದ ಪ್ರೋ ಕಬಡ್ಡಿ ಮಾದರಿಯ ಕಬಡ್ಡಿ ಲೀಗ್ ಪಂದ್ಯಾಟದಲ್ಲಿ ನ್ಯಾಚುರಲ್ ಕ್ಯಾಸ್ಯುನೆಟ್ ಪ್ರಥಮ ಹಾಗೂ ಚಿಗುರು ಯುವಕಮಂಡಲ ಪೆರಾಜೆ ದ್ವಿತೀಯ ಸ್ಥಾನ ಪಡೆದುಕೊಂಡರು.

ಪೆರಾಜೆ ಮತ್ತು ಕರಿಕೆ, ಕೇರಳದ ಕಲ್ಲಪಳ್ಳಿ ಹಾಗೂ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮಗಳನ್ನೊಳಗೊಂಡ ಪಂದ್ಯಾಕೂಟದ ಸೆಮಿಫೈನಲ್ಸ್ ನಲ್ಲಿ ಸೂರ್ಯ ಅರ್ಥ್ ಮೂವರ್ಸ್ ತಂಡವನ್ನು ಚಿಗುರು ಯುವಕ ಮಂಡಲ ತಂಡ 4-11 ಅಂಕಗಳಿಂದ ಸೋಲಿಸಿ ಪೈನಲ್ ಪ್ರವೇಶಿಸಿತು. ಇದಾದ ಬಳಿಕ ಸುರಿದ ಭಾರಿ ಮಳೆಯಿಂದಾಗಿ ಆಟ ನಡೆಸಲಾಗದೆ ಇನ್ನೊಂದು ಸೆಮಿಫೈನಲ್ಸನ್ನು ರೆಡ್ ವಾರಿಯರ್ಸ್ ಕಲ್ಲಪಳ್ಳಿ ತಂಡ ವಿರುದ್ಧ ನಾಣ್ಯಚಿಮ್ಮಗೆಯಲ್ಲಿ ನ್ಯಾಚುರಲ್ ಕ್ಯಾಸ್ಯುನೆಟ್ ತಂಡ ಗೆದ್ದುಕೊಂಡಿತು. ಪೈನಲ್ ಪಂದ್ಯಕ್ಕೂ ನಿಲ್ಲದ ಮಳೆ ಹಾಗೂ ಮಂದಬೆಳಕಿನ ಕಾರಣದಿಂದ ಆಯೋಜಕರು ಉಭಯ ತಂಡಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಾಸ್ ವಿನ್ ಮ್ಯಾಚ್ ವಿನ್ ಎಂಬ ನಿಯಮದಂತೆ ವಿಜಯಿ ಎಂದು ಘೋಷಿಸಿದರು.