ಸುಂಟಿಕೊಪ್ಪ, ಡಿ. 7: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ 14 ಲಕ್ಷ ರೂವಿನ ವಿವಿಧ ಕಾಮಗಾರಿಗಳಿಗೆ ತಾ.ಪಂ.ನ ಸಬಿತಾ ಚೆನ್ನಕೇಶವ ಭೂಮಿ ಪೂಜೆ ನೇರವೇರಿಸಿದರು.
ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿ ಹಾಗೂ ಸುಣ್ಣ ಬಣ್ಣ ಬಳಿಯಲು 3.60, ಲಕ್ಷ ಕಾಜೂರು ಗುಳಿಗಪ್ಪ ಮಂಟಪದ ಸಮುದಾಯ ಭವನಕ್ಕೆ ರೂ. 2 ಲಕ್ಷ, ಕಾಳೇರಮ್ಮನ ಕುಟುಂಬಸ್ಥರ ಮನೆ ರಸ್ತೆಗೆ ರೂ. 3 ಲಕ್ಷ, ಕಾಜೂರು ಕೃಷ್ಣಕುಟ್ಟಿ ಮನೆ ಒತ್ತಿನ ಚರಂಡಿ ಕಾಮಗಾರಿಗೆ 2 ಲಕ್ಷ ರೂಗಳನ್ನು ಬಿಡುಗಡೆಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಐಗೂರು ಗ್ರಾ.ಪಂ. ಸದಸ್ಯರುಗಳಾದ ಗೋಪಾಲ, ಮಂಜುಳ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎ. ಪ್ರಭಾಕರ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಟಿ.ಆರ್. ವಿಜಯ, ಒ.ಆರ್. ಶಶಿ, ವಿನೋದ್ ವಸಂತ, ಕೃಷ್ಣ, ಕಾಳೇರಮ್ಮನ ಸೋಮೇಶ್ ಹಾಗೂ ಜಿ.ಕೆ. ಅವಿಲಾಷ್ ಉಪಸ್ಥಿತರಿದ್ದರು.