ವೀರಾಜಪೇಟೆ, ಡಿ. 6: ಪ್ರಕೃತಿ ವಿಕೋಪ ತಡೆಗಟ್ಟಲು ಮನುಷ್ಯನು ಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಪತ್ತು ನಿರ್ವಹಣಾ ಘಟಕದ ಸಂಪನ್ಮೂಲ ವ್ಯಕ್ತಿ ಮನೋಹರ್ ಅಭಿಪ್ರಾಯಪಟ್ಟರು.
ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ .ಎಸ್.ಎಸ್ ಘಟಕದ ವತಿಯಿಂದ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಪ್ರಕೃತಿ ವಿಕೋಪ ಹಾಗೂ ಜಾಗ್ರತಾ ಕ್ರಮಗಳು ವಿಷಯದ ಕುರಿತು ಮಾತನಾಡಿ ಪ್ರಕೃತಿ ವಿಕೋಪಕ್ಕೆ ಮನುಷ್ಯನೇ ನೇರವಾಗಿ ಕಾರಣನಾಗಿದ್ದಾನೆ, ಮಾನವನ ದುರಾಸೆಯಿಂದಾಗಿ ಪ್ರಕೃತಿಯು ವಿನಾಶದ ಅಂಚಿಗೆ ಹೋಗುತ್ತಿದೆ. ಕಾಡಿನ ನಾಶ, ಕಟ್ಟಡಗಳ ನಿರ್ಮಾಣ, ಗಣಿಗಾರಿಕೆ ಇದರಿಂದಾಗಿ ಪ್ರಕೃತಿಯಲ್ಲಿ ಏರುಪೇರುಗಳಾಗುತ್ತಿದೆ. ಪ್ರಕೃತಿ ವಿಕೋಪಗಳನ್ನು ತಡೆಯಲು ಹಲವಾರು ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು. ಮುಂದಿನ ದಿನಗಳಲ್ಲಿ ಮಾನವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮ್ಮತ್ತಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಕೆ.ಸಿ ಸುಬ್ಬಯ್ಯ ಮಾತನಾಡುತ್ತ ಪ್ರಕೃತಿ ವಿಕೋಪ ಎಂಬದು ಒಂದು ಸವಾಲಾಗಿದ್ದು, ಅದು ಇಡೀ ವಾತಾವರಣವನ್ನೇ ನಾಶಪಡಿಸುತ್ತದೆ. ವಾತಾವರಣದಲ್ಲಿ ಸ್ಥಿರತೆ ಇರುವದಿಲ್ಲ. ಈ ಎಲ್ಲ ಅನಾಹುತಗಳಿಗೆ ಮಾನವನೇ ನೈಜ್ಯ ಕಾರ್ಯಕರ್ತ ಎಂದು ಹೇಳಿದರು.
ವೇದಿಕೆಯಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ನ ಅಧ್ಯಕ್ಷ ನಡಿಕೇರಿಯಂಡ ಜ್ಯೋತಿ ಪೆÇನ್ನಪ್ಪ, ಅಮ್ಮತ್ತಿ ಹೋಬಳಿಯ ಕಂದಾಯ ನಿರೀಕ್ಷಕ ಎಮ್.ಎ. ಹರೀಶ್, ಎನ್.ಎಸ್.ಎಸ್ ಅಧಿಕಾರಿ ಅರ್ಜುನ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್.ನ ಶಿಬಿರಾರ್ಥಿ ಗಳು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.