ವೀರಾಜಪೇಟೆ, ಡಿ. 6: ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ವಾರಿಸುದಾರರಿಲ್ಲದ ಮೋಟಾರ್ ಬೈಕ್‍ಗಳನ್ನು ಠಾಣಾ ಆವರಣದಲ್ಲಿರಿಸಲಾಗಿದ್ದು ಮೋಟಾರ್ ಬೈಕ್‍ಗಳ ವಾರಿಸುದಾರರು ಇಲ್ಲದ್ದರಿಂದ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪೊಲೀಸ್ ಠಾಣಾ ಆವರಣದಲ್ಲಿ ತಾ. 8ರಂದು ಹರಾಜು ಪ್ರಕ್ರಿಯೆ ನಡೆಸಲಾಗುವದು ಎಂದು ವೀರಾಜಪೇಟೆ ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08274-257333ನ್ನು ಅಥವಾ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಅವರ ಮೊ. 9480804955 ಅನ್ನು ಸಂಪರ್ಕಿಸಬಹುದು.