ರಾಜ್ಯ ಸಬ್ ಜೂನಿಯರ್ ಹಾಕಿ

ಮಡಿಕೇರಿ, ಡಿ. 6: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನ ಫೀ.ಮಾ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಬ್ ಜೂನಿಯರ್ ಬಾಲಕರ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲೆ ತಂಡ ಹಾಗೂ ಕೂಡಿಗೆ (ಎ) ಕ್ರೀಡಾ ಶಾಲಾ ತಂಡಗಳು ಫೈನಲ್ಸ್‍ಗೆ ಪ್ರವೇಶಿಸಿವೆ.

ಇಂದು ನಡೆದ ಸೆಮಿಫೈನಲ್ಸ್‍ನಲ್ಲಿ ಕೂಡಿಗೆ ತಂಡವು ಬಳ್ಳಾರಿ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿ ಫೈನಲ್‍ಗೇರಿತು. ಕೂಡಿಗೆ ಪರ ಪವನ್ ಕೆ.ಜೆ. (3), ಧ್ರುವ (2), ಹೆಚ್.ಆರ್. ಹರ್ಷ (1) ಗೋಲು ಬಾರಿಸಿದರು. ಮತ್ತೊಂದು ಸೆಮಿಫೈನಲ್ಸ್‍ನಲ್ಲಿ ಪೊನ್ನಂಪೇಟೆ ತಂಡ ಹಾಕಿ ಕೂರ್ಗ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು. ಪೊನ್ನಂಪೇಟೆ ಪರ ಪಿ.ಪಿ. ಸಫನ್ (2), ಬಿ.ಆರ್. ಬಿಪಿನ್, ವಚನ್ ಅಯ್ಯಪ್ಪ, ಧ್ರುವಿನ್ ತಲಾ ಒಂದು ಗೋಲು ಬಾರಿಸಿದರು.