ಮಡಿಕೇರಿ, ಡಿ. 6: ಹಾಕಿ ಇಂಡಿಯಾ ವತಿಯಿಂದ 10ನೇ ಹಿರಿಯ ಪುರುಷರ ಎ ಡಿವಿಜನ್ ರಾಷ್ಟ್ರೀಯ ಚಾಂಪಿಯನ್‍ಶಿಪ್-2020 ಪಂದ್ಯಾವಳಿ ಏರ್ಪಡಿಸಿದ್ದು, ಈ ನಿಟ್ಟಿನಲ್ಲಿ ಹಾಕಿ ಕರ್ನಾಟಕ ವತಿಯಿಂದÀ ಆಟಗಾರರ ಆಯ್ಕೆ ಶಿಬಿರ ಏರ್ಪಡಿಸಿದೆ. ಆಯ್ಕೆ ಪ್ರಕ್ರಿಯೆ ಬೆಂಗಳೂರಿನ ಶಾಂತಿ ನಗರದಲ್ಲಿರುವ ಫೀ.ಮಾ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ತಾ. 9 ಹಾಗೂ 10 ರಂದು ಬೆಳಿಗ್ಗೆ 7 ಗಂಟೆಯಿಂದ ನಡೆಯಲಿದೆ. ಪಂದ್ಯಾವಳಿಯು ಉತ್ತರ ಪ್ರದೇಶದ ಲಕ್ನೋದಲ್ಲಿ ಜ. 22 ರಿಂದ ಫೆ. 2ರ ವರೆಗೆ ನಡೆಯಲಿದೆ ಎಂದು ಹಾಕಿ ಕರ್ನಾಟಕ ಪ್ರಕಟಣೆ ತಿಳಿಸಿದೆ.