ವೀರಾಜಪೇಟೆ, ಡಿ.6: ಭಾರತದಲ್ಲಿ ಚಿಕಿತ್ಸಾ ವಿಧಿಗಳಲ್ಲಿ ಅಪಘಾತ, ಹೃದ್ರೋಗದಂತಹ ತುರ್ತು ಚಿಕಿತ್ಸೆಗೆ ಪ್ರಾಮುಖ್ಯತೆ ಇಲ್ಲದಿರುವದರಿಂದ ಸಾವಿನ ಸಂಖೈ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಸಂಶೋಧನೆಯ ಪ್ರಕಾರ ದೇಶದಲ್ಲಿ ಪ್ರತಿ ಗಂಟೆಗೆ 17 ಮರಣಗಳಿಗೆ ರಸ್ತೆ ಅಪಘಾತ ಕಾರಣವಾಗಿದೆ ಇದರಲ್ಲಿ 50 ಪ್ರತಿಶತ ಮರಣಗಳಿಗೆ ತುರ್ತು ಚಿಕಿತ್ಸೆ ದೊರೆತಲ್ಲಿ ಜೀವ ಹಾನಿಯನ್ನು ತಡೆಗಟ್ಟಬಹುದಾಗಿದೆ ಎಂದು ಜೀವ ರಕ್ಷಾ ಟ್ರಸ್ಟ್‍ನ ಮುಖ್ಯ ತರಬೇತುದಾರ ಡಾ: ರಾಮಕೃಷ್ಣ ನಾಯರ್ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಮಗ್ಗುಲದಲಿ ್ಲರುವ ಕೊಡಗು ದಂತ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಾಲ್ಕು ದಿನಗಳಿಂದ ಹಮ್ಮಿಕೊಂಡಿದ್ದ ಜೀವ ರಕ್ಷಾ ತುರ್ತು ಚಿಕಿತ್ಸಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಜೀವ ರಕ್ಷಾ ತರಬೇತಿ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದ ಡಾ: ರಾಮಕೃಷ್ಣನ್ ಅವರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಕಾಲೇಜುಗಳ ಸಹ ವರ್ಗದವರಿಗೂ ತರಬೇತಿ ನೀಡಲು ರಾಜೀವ್‍ಗಾಂಧಿ ವಿಶ್ವವಿದ್ಯಾಲಯ, ಸ್ವಾಮಿ ವಿವೇಕಾನಂದ ಯುವ ಘಟಕ ಹಾಗೂ ಅಮೇರಿಕದ ಸಾಲ್ಟ್‍ಲೇಖ್ ನಗರದ ಸಂಯೋಜನೆಯಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ತುರ್ತು ಸಂದರ್ಭ ಚಿಕಿತ್ಸೆ ನೀಡುವ ವಿಧಿವಿಧಾನಗಳನ್ನು ಅನುಸರಿಸುವ ಕ್ರಮವೇ ಈ ತರಬೇತಿಯ ಮುಖ್ಯ ಉದ್ದೇಶ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ: ಕೆ.ಪಿ.ಪೊನ್ನಪ್ಪ, ಉಪ ಪ್ರಾಂಶುಪಾಲ ಡಾ: ಜಿತೇಶ್ ಜೈನ್, ಹಾಗೂ ಡಾ:ಶಾಂತಲಾ ಉಪಸ್ಥಿತರಿದ್ದರು.
ನಾಲ್ಕು ದಿನಗಳÀ ತರಬೇತಿ ಶಿಬಿರದಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.