ಮಡಿಕೇರಿ, ಡಿ. 6: ಕೊಡಗು ಸಮಸ್ತ ಮಹಾಸಮ್ಮೇಳನವನ್ನು ತಾ.17ರಂದು ಆಯೋಜಿಸಲಾಗು ವದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎ.ಯಾಕೂಬ್ ಹಾಗೂ ಪ್ರಧಾನ ಸಂಯೋಜಕ ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಷನ್ ಹಾಗೂ ಜಂಇಯ್ಯತ್ತುಲ್ ಮುಹಲ್ಲಿಮೀನ್ ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ತಾ.17ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದರು.

ಸಮಸ್ತ ಎಂಬದು ಧಾರ್ಮಿಕ ಸಂಘಟನೆಯಾಗಿದ್ದು, ಭಾರತದ ಮುಸಲ್ಮಾನರ ಮಧ್ಯೆ ಧಾರ್ಮಿಕ ಆಚಾರ ವಿಚಾರ ಮತ್ತು ಅನುಷ್ಠಾನ ಗಳಲ್ಲಿ ಉಂಟಾದ ಗೊಂದಲಗಳನ್ನು ಪರಿಹರಿಸುವದಕ್ಕಾಗಿ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರರು ಇಲ್ಲಿ ಪ್ರಚಾರ ಮಾಡಿ ಅನುಷ್ಠಾನಕ್ಕೆ ತಂದ ಸತ್ಯ ಮತ್ತು ನೈಜವದ ಇಸ್ಲಾಮಿನ ವಿಶ್ವಾಸ ಮತ್ತು ಅನುಷ್ಠಾನಗಳನ್ನು ಮಾರ್ಗದರ್ಶನ ನೀಡುತ್ತಾ ಸನ್ಮಾರ್ಗದ ಕಡೆಗೆ ಕೊಂಡೊಯ್ಯು ವಲ್ಲಿ ಯಶಸ್ಸು ಸಾಧಿಸಿದೆ ಎಂದು ವಿವರಿಸಿದರು.

ಮಡಿಕೇರಿಯಲ್ಲಿ ನಡೆಯಲಿರುವ ಸಮಸ್ತದ ಮಹಾಸಮ್ಮೇಳನದಲ್ಲಿ ಉನ್ನತ ಉಲಮಾಗಳು, ಅಂತರರಾಷ್ಟ್ರೀಯ ಮಟ್ಟದ ಭಾಷಣಕಾರರು, ಧಾರ್ಮಿಕ, ರಾಜಕೀಯ, ಸಾಮಾಜಿಕ ಉನ್ನತ ನಾಯಕರು ಭಾಗವಹಿಸಲಿದ್ದು, ಕೊಡಗು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಿಂದಲೂ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕ ಕೆ.ಐ.ರಫೀಕ್, ಹಾರೂನ್ ಹಾಜಿ, ಹಸನ್‍ಕುಂಞÂ ಹಾಜಿ, ಸದಸ್ಯರಾದ ಪಿ.ಎಂ. ಅಬ್ದುಲ್ಲಾ ಹಾಗೂ ಎಂ.ಎ.ಹಂಸ ಉಪಸ್ಥಿತರಿದ್ದರು.