ಶ್ರೀಮಂಗಲ, ಡಿ. 6: ಯುಕೊ ಸಂಘಟನೆಯ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಜಾಗತಿಕ ಕೊಡವ ಸಾಂಸ್ಕøತಿಕ ಸಮ್ಮಿಲನ “ಯುಕೊ ಕೊಡವ ಮಂದ್ ನಮ್ಮೆ”ಯ ಆರÀನೇ ವರ್ಷದ ಆಚರಣೆಯು ತಾ. 25ರಂದು ಬೆಪ್ಪುನಾಡಿನ ಇತಿಹಾಸ ಪ್ರಸಿದ್ಧ ಕಾಕೋಟುಪರಂಬು ಮೈದಾನದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಲಾಗಿದೆÉ ಎಂದು ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ತಿಳಿಸಿದ್ದಾರೆ. ಕಾಕೋಟುಪರಂಬುವಿನಲ್ಲಿ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರ ಶ್ರೀಮಂಗಲ, ಡಿ. 6: ಯುಕೊ ಸಂಘಟನೆಯ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಜಾಗತಿಕ ಕೊಡವ ಸಾಂಸ್ಕøತಿಕ ಸಮ್ಮಿಲನ “ಯುಕೊ ಕೊಡವ ಮಂದ್ ನಮ್ಮೆ”ಯ ಆರÀನೇ ವರ್ಷದ ಆಚರಣೆಯು ತಾ. 25ರಂದು ಬೆಪ್ಪುನಾಡಿನ ಇತಿಹಾಸ ಪ್ರಸಿದ್ಧ ಕಾಕೋಟುಪರಂಬು ಮೈದಾನದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಲಾಗಿದೆÉ ಎಂದು ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ತಿಳಿಸಿದ್ದಾರೆ. ಕಾಕೋಟುಪರಂಬುವಿನಲ್ಲಿ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರ ವ್ಯವಸ್ಥೆಯನ್ನು ರೂಪಿಸಿ, ಅದನ್ನು ಕೊಡವ ಸಂಸ್ಕøತಿಗೆ ಸಮರ್ಪಿಸಿ, ಜನಾಂಗದ ಸಾಮಾಜಿಕ ಮೌಲ್ಯವನ್ನು ಶಿಖರದಂತೆ ಭದ್ರವಾಗಿ ನಿಲ್ಲಿಸಿದ್ದರಲ್ಲದೆ, ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ವ್ಯವಸ್ಥೆಯನ್ನೂ ರೂಪಿಸಿದ್ದರು. ಆ ವ್ಯವಸ್ಥೆಯು ಇಂದಿನ ಲೌಖಿಕ ಸಮಾಜದ ಎಲ್ಲಾ ಉನ್ನತೀಕರಣಕ್ಕೆ ಬುನಾದಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.ಈ ವರ್ಷವೂ 30ಕ್ಕೂ ಹೆಚ್ಚಿನ ಮಂದ್‍ಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಎಲ್ಲ ಮಂದ್‍ಗಳಿಗೆ ವಿಶೇಷವಾಗಿ ‘ಮಂದ್ ಮರ್ಯಾದಿ’ ನೀಡಲಾಗುವದು. ತಾ.25 ರಂದು ಬೆಳಿಗ್ಗೆ 9 ಗಂಟೆಗೆ ಆಗಮಿಸುವ ಮಂದ್‍ಗೆ ಸಾಂಪ್ರದಾಯಿ ಕವಾಗಿ ‘ಮಂದ್ ಮರ್ಯಾದಿ’ ಎಂಬ ಗೌರವವನ್ನು ನೀಡಿ ಬರಮಾಡಿಕೊಳ್ಳುವದರ ಮೂಲಕ ಸಾಂಪ್ರದಾಯಿಕ ಮಂದ್ ನಮ್ಮೆಗೆ ಚಾಲನೆ ನೀಡಲಾಗುವದು. ಆನಂತರ ಮಂದ್‍ನ ಚಟುವಟಿಕೆ ಗಳಾದ ‘ಪುತ್ತರಿ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ತೆಂಗೆ ಬೊಡಿ, ಬಾಳೋಪಾಟ್, ಪರಿಯಕಳಿ, ಮಕ್ಕಳ ಕಪ್ಪೆಯಾಟ್,
(ಮೊದಲ ಪುಟದಿಂದ) ಹಾಗೂ ವಾಲಗತಾಟ್ ಪೈಪೋಟಿ’ ನಡೆಯಲಿವೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ‘ಕೊಂಬಮೀಸೆರ ಬಂಬೊ - ಬೋಜಿ ಜಡೆರ ಬೋಜಕ್ಕ’, ಎಂಬ ಸ್ಪರ್ಧೆ ನಡೆಯಲಿದೆ ಕೊಡವ ಸಂಸ್ಕøತಿಗೆ ಭೂಷಣವಾಗಿರುವ ಮೀಸೆ ಹಾಗೂ ಜಡೆ ಸಂಸ್ಕøತಿಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ವರ್ಷ ವಿಶೇಷವಾಗಿ 12 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ‘ಬೋಜಿ ಜಡೆರ ಬೋಜಿ ಮೋವ’ ಎಂಬ ಸ್ಪರ್ಧೆಯನ್ನು ಆಯೋಜಿಸಿರುವದಾಗಿ ತಿಳಿಸಿದರು.
‘ಮೊದ ಜೊಪ್ಪೆ’: ಕೊಡವ ಮಂದ್ ನಮ್ಮೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಆಕರ್ಷಕ ಕೊಡವ ಸಾಂಪ್ರದಾಯಿಕ ಆಭರಣಗಳ ವಿಶೇಷ ‘ಮೊದ ಜೊಪ್ಪೆ’ ಎಂಬ ಈ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರಲ್ಲಿ ಕೊಕ್ಕೆತಾತಿ, ಪೀಚೆಕತ್ತಿ, ಅರ್ದ ಪವನ್ ಹಾಗೂ ಕಾಲು ಪವನ್ ಚಿನ್ನವನ್ನು ಬಹುಮಾನವಾಗಿ ನೀಡಲಾಗುವದು ಎಂದು ಮಾಹಿತಿ ನೀಡಿದರು.
ಈ ವರ್ಷ ಪ್ರಥಮ ಬಾರಿಗೆ ವಿಶಿಷ್ಟ ಹಾಗೂ ವಿನೂತನವಾಗಿ ಕೊಡವ ತಕ್ಕ್ ನಮ್ಮೆಯನ್ನು (ಲಿಟ್‍ಫೆಸ್ಟ್) ಮಂದ್‍ನಮ್ಮೆಯಲ್ಲಿ ಆಯೋಜಿಸಲಾಗಿದ್ದು, ಪೂರ್ವಾಹ್ನ 11 ಗಂಟೆಗೆ “ಪಳೆಯಾಮೆ, ಪುದಿಯಾಮೆರ ನಡುಲ್ ಕೊಡವಾಮೆ” ಎಂಬ ವಿಚಾರದಲ್ಲಿ ಸಂವಾದ ಕಾರ್ಯಕ್ರಮ, 11.30 ಕ್ಕೆ ವಿಚಾರಗೋಷ್ಠಿ “ದೇಶತ್‍ರ ಸ್ವಾತಂತ್ರ್ಯ ಮಹಾಪಡೆಲ್ ಕೊಡವಡ ಕೇಳಿ” ಎಂಬ ವಿಷಯದಲ್ಲಿ ನಡೆಯಲಿದೆ. ಇದರಲ್ಲಿ ಇತಿಹಾಸಗಾರರು, ವಿಚಾರವಂತರು, ಸಾಹಿತಿಗಳು ಮತ್ತು ತಜ್ಞರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅಪರಾಹ್ನ 3 ಗಂಟೆಗೆ ಕವಿಗೋಷ್ಠಿ, 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ, ಮಂಜು ಚಿಣ್ಣಪ್ಪ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಸಭೆಯಲ್ಲಿ ಯುಕೊ ಸಂಘಟನೆಯ ಕಳ್ಳಿಚಂಡ ರಾಬಿನ್‍ಸುಬ್ಬಯ್ಯ, ಚೆಪ್ಪುಡಿರ ಸುಜುಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಗುಡಿಯಂಗಡ ಲಿಕಿನ್‍ಬೋಪಣ್ಣ, ಪುದಿಯೊಕ್ಕಡ ದಿನೇಶ್ ಹಾಜರಿದ್ದರು. ಕಾಕೋಟುಪರಂಬುವಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಕ್ಕಮುಖ್ಯಸ್ಥರು ಸೇರಿದಂತೆ ಪ್ರಮುಖರಾದ ಮೇವಡ ಅಚ್ಚಯ್ಯ, ಮುತ್ತಪ್ಪ, ವಿಷ್ಮ, ಅಯ್ಯಣ್ಣ, ಮಂಡೇಟಿರ ಪೆಮ್ಮಯ್ಯ, ಕಾಳಪ್ಪ, ವಸಂತ್, ಪ್ರಭು, ಅಯ್ಯಪ್ಪ, ಅಮ್ಮಂಡೀರ ಅಪ್ಪಯ್ಯ, ಗಣಪತಿ, ಮಂದಣ್ಣ, ನೆಲ್ಲಮಕ್ಕಡ ಮುತ್ತಪ್ಪ, ಪವನ್, ಪ್ರಮೋದ್, ಐಚೆಟ್ಟೀರ ಸುತನ್, ಬೇರೆರ ಬೆಳ್ಯಪ್ಪ, ಮುಳ್ಳೇರ ಮಂಜುನಾಥ್, ಚೇಂಬಂಡ ಪೂವಯ್ಯ, ಮೂಳೇರ ಸುಬ್ಬಯ್ಯ, ಪೂವಯ್ಯ, ಕೋಟೇರ ಪೂಣಚ್ಚ, ಕುಂಞÂೀರ ಭೀಮಯ್ಯ ಹಾಜರಿದ್ದರು ಎಂದು ಮಂಜುಚಿಣ್ಣಪ್ಪ ಅವರು ವಿವರಿಸಿದರು.