ಪಾಡಿ, ಡಿ. 6: ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸುವ ಕುರಿತು ಇಂದು ದೇವಾಲಯ ಆವರಣದಲ್ಲಿ ನಡೆದ ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನಸಂಘದ ಮಹಾಸಭೆಯಲ್ಲಿ ಮುಕ್ತ ಚರ್ಚೆ ನಡೆಯಿತು.ಅಲ್ಲದೆ ತಲತಲಾಂತರ ದಿಂದ ಇರುವಂತಹ ಸಾಂಪ್ರದಾಯಿಕ ನಂಬಿಕೆ ಮತ್ತು ಕ್ರಮಗಳನ್ನು ಕೈ ಬಿಡದಂತೆ ಹಾಗೂ ಯಥಾವತ್ತಾಗಿ ಕಾಪಾಡಿಕೊಂಡು ಬರುವಂತೆ ಸದಸ್ಯರು ಸಲಹೆ ನೀಡಿದ್ದು ಆಡಳಿತ ಮಂಡಳಿ ಇದಕ್ಕೆ ಸಮ್ಮತಿ ನೀಡಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಂಡಂಡ ಬಿ. ಜೋಯಪ್ಪ ವಹಿಸಿದ್ದರು. ಇದೀಗ ದೇವಾಲಯ ದಲ್ಲಿ ನಾಮಕರಣ ಮೊದಲಾದ ಖಾಸಗಿ ಕಾರ್ಯಕ್ರಮಗಳ ಸಂದರ್ಭ ಅನ್ನ ಸಂತರ್ಪಣೆಯನ್ನು ಕಾರ್ಯ ಕ್ರಮಗಳನ್ನು ಕೈಗೊಳ್ಳುವÀವರಿಗೆ ಪ್ರತ್ಯೇಕವಾಗಿ ನಡೆಸಬಾರದು ಎಂದು ತೀರ್ಮಾನಿಸಲಾಯಿತು. ಇದರಿಂದ ದೇವಾಲಯಕ್ಕೆ ಬರುವ ಇತರ ಭಕ್ತಾದಿ ಗಳಿಗೆ ತಾರತಮ್ಯ ಉಂಟಾಗುತ್ತದೆ. ಸರ್ವರಿಗೂ ಒಂದೇ ರೀತಿಯ ಅನ್ನದಾನ ನಡೆಸುವಂತೆ ಜ್ಯೋತಿ ಶ್ಶ್ಶಾಸ್ತ್ರಜ್ಞರು ಕೂಡ ಪ್ರಶ್ನೆಯಲ್ಲಿ ನಿರ್ದೇಶನವಿತ್ತಿದ್ದಾರೆ. ಇನ್ನು ಮುಂದೆ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆಯಿರುತ್ತದೆ. ಮಧ್ಯ್ಯಾಹ್ನ 2 ಗಂಟೆವರೆಗೂ ಮುಂದುವರಿಯುತ್ತದೆ, ಆದರೆ, ಯಾರಿಗೂ, ಪ್ರತ್ಯೇಕ ಅಡುಗೆ ತಯಾರಿಕೆ ಯಾಗಲಿ, ಭೋಜನ ವ್ಯವಸ್ಥೆಯಾಗಲೀ ನಡೆಸಬಾರದು. ಎಲ್ಲರಿಗೂ ಸಾರ್ವತ್ರಿಕ ಅನ್ನ ಸಂತರ್ಪಣೆ ನಡೆಯಬೇಕು ಎಂದು ಮಹಾಸಭೆಯಲ್ಲಿ ತೀರ್ಮಾನಿ ಸಲಾಯಿತು.(ಮೊದಲ ಪುಟದಿಂದ) ದೇವಾಲಯದ ಮುಂಭಾಗದಲ್ಲಿ ಪುರಾತನ ಕಾಲದಿಂದಲೂ ಮೆಟ್ಟಿಲುಗಳಿವೆ. ಆದರೆ, ಪೂರ್ವ ಕಾಲದಿಂದಲೂ ಈ ಮೆಟ್ಟಿಲುಗಳನ್ನೇರಿ ಯಾರೂ ದೇವಾಲಯಕ್ಕೆ ತೆರಳುತ್ತಿಲ್ಲ. ದೇವರ ನಡೆಯಿರುವ ಸ್ಥಳ ಎಂಬ ನಂಬಿಕೆಯಿಂದ ಹೋಗುತ್ತಿಲ್ಲ ಆದರೆ, ಇದೀಗ ಈ ಮೆಟ್ಟಿಲುಗಳನ್ನು ದುರಸ್ತಿಗೊಳಿಸಿ ವಿಸ್ತರಿಸಲಾಗುತ್ತಿದೆ. ಇನ್ನು ಮುಂದೆ ಈ ಮೆಟ್ಟ್ಟಿಲುಗಳನ್ನು ಹತ್ತಿ ತೆರಳಬಹುದೇ ಎಂಬ ಪ್ರಶ್ನೆ ಸಭೆಯಲ್ಲಿ ಎದುರಾಯಿತು. ಆದರೆ,À ಬಹುತೇಕ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂದಿನ ಕಾಲ ದಿಂದಲೂ ಇದೊಂದು ನಂಬಿಕೆಯಾಗಿ ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಾಂಪ್ರದಾಯಿಕ ನಂಬಿಕೆಗೆÀ ಧಕ್ಕೆಯಾಗುವದು ಬೇಡ. ಈಗÀ ಅಶ್ವತ್ಥಕಟ್ಟೆ ಇರುವ ದಿಕ್ಕಿನಿಂದÀ ಭಕ್ತ್ತಾದಿಗಳು ತೆರಳುತ್ತಿರುವ ಕ್ರಮವೇ ಮುಂದುವರಿಯಲಿ. ಪ್ರತ್ಯೇಕ ಮಾರ್ಗ ಕಲ್ಪಿಸುವದು ಬೇಡ ಎಂದು ಸರ್ವಾನು ಮತದ ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರು ಭಕ್ತಜನ ಸಂಘದ ಸದಸ್ಯ ಕೋಡಿಮಣಿಯಂಡ ರಮೇಶ್ ನಂಜಪ್ಪ ಅವರ ಪ್ರಯತ್ನದಿಂದ ಪಾಡಿ ದೇವಾಲಯ ಪೌಳಿಯ ಪುನರ್ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ರೂ. 80 ಲಕ್ಷ ಉದಾರ ನೆರವು ನೀಡುವದಾಗಿ ತಿಳಿಸಿದ್ದಾರೆ. ಈಗಾಗಲೇ ಪ್ರಥಮ ಕಂತಾಗಿ ಅವರು ರೂ. 25 ಲಕ್ಷವನ್ನು ನೀಡಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಬೊಳಂದಂಡ ಲಲಿತ ನಂದಕುಮಾರ್ ಸಭೆಗೆ ತಿಳಿಸಿದರು. ನಿವೃತ್ತ ಕಾರ್ಯಪಾಲಕ ಅಭಿಯಂತರ ಕೋಡಿಮಣಿಯಂಡ ವಿಶ್ವನಾಥ್ ಮುತ್ತಪ್ಪ ಅವರು ಈ ಯೋಜನೆಯ ಉಸ್ತುವಾರಿ ನಡೆಸಲಿರುವದಾಗಿ ಮಾಹಿತಿಯಿತ್ತರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಡಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಈ ಸಂಬಂಧ ಸೂಕ್ತ ನಕ್ಷೆ, ಕೊಟೇಷನ್ ಪ್ರಕ್ರಿಯೆಗಳು ನಡೆದು ಸಮರ್ಪಕ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಲಹೆಯಿತ್ತರು. ಬಳಿಕ ಈ ಯೋಜನೆಗೆ ಮಹಾಸಭೆ ಸರ್ವಾನು ಮತದ ಸಮ್ಮತಿ ನೀಡಿ ದಾನಿಗಳಿಗೆ ಧನ್ಯವಾದ ಅರ್ಪಿಸಲಾಯಿತು.

ಗರ್ಭಗುಡಿ ಮೇಲ್ಛಾವಣಿಗೆ ಎನ್ ಆರ್ ಐ ದಾನಿಗಳು ಚಿನ್ನದ ಹೊದಿಕೆ ಅಳವಡಿಸಲು ಮುಂದೆ ಬಂದಿದ್ದಾರೆ. ಇದರ ವೆಚ್ಚ ಸುಮಾರು ರೂ. 4 ಕೋಟಿ ತಲುಪಬಹುದು. ಇದಕ್ಕೆ ಅಗತ್ಯವಿರುವ ಅನುಮತಿ ಮತ್ತಿತರ ಪ್ರಕ್ರಿಯೆಗಳನ್ನು ನಡೆಸುವಂತೆ ಉದಿಯಂಡ ಮೋಹನ್ ಪೆಮ್ಮಯ್ಯ ಸಲಹೆಯಿತ್ತರು.

ಪಾಡಿಯಲ್ಲಿ ಅತಿಥಿ ಗೃÀಹವೊಂದರ ನಿರ್ಮಾಣವು ಸರಕಾರೀ ಮಟ್ಟದಲ್ಲಿ ನಡೆದಿದ್ದು ಅದರ ಕೆಲಸ ಸಮರ್ಪಕವಾಗಿ ಆಗದೆ, ನಿಷ್ಪ್ರÀಯೋಜಕವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂದಿತು. ಈ ಬಗ್ಗೆ ಲವ ಚಿಣ್ಣಪ್ಪ ಪ್ರತಿಕ್ರಿಯಿಸಿ. ದೇವಾಲಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆÀಯಡಿ ಸರಕಾರದಿಂದ ರೂ. 1 ಕೋಟಿ ಖರ್ಚು ಮಾಡಲಾಗಿದೆ. ಸಂಘದಿಂದಲೂ ರೂ. 16 ಲಕ್ಷ ಕೊಡಲಾಗಿದೆ. ಅದರೆ, ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂದು ಲವ ಚಿಣ್ಣಪ್ಪ ಸಭೆಗೆ ತಿಳಿಸಿದರು.ಈ ಬಗ್ಗೆ ಜಿಲ್ಲ್ಲಾಧಿಕಾರಿಯವರ ಗಮನಕ್ಕೆ ತರಲಾಗುತ್ತದೆ ಎಂದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಖಜಾಂಚಿ ನಂಬುಡುಮಂಡ ಸುಬ್ರಮಣಿ, ಕಲಿಯಂಡ ಹ್ಯಾರಿ ಮಂದಣ್ಣ ಮೊದಲಾದವರಿದ್ದರು

ಪ್ರಮುಖರುಗಳಾದ ಕಲಿಯಂಡ ನಾಣಯ್ಯ, ಅಂಜಪರವಂಡ ಕುಶಾಲಪ್ಪ, ಬೊಳ್ಯಾಡಿರ ಸಂತು ಸುಬ್ರಮಣಿ, ಶೈಲಜಾ ಕುಟ್ಟಪ್ಪ, ಪಾಂಡಂಡ ನರೇಶ್,ಕಣಿಯೂರು ನಾಣಯ್ಯ, ಅರ್ಚಕ ಕುಶ, ಜಿ.ರಾಜೇಂದ್ರ, ಮೊದಲಾದವರು ಸಲಹೆಗಳನ್ನಿತ್ತರು. ನಿವೃತ್ತ ಡಿವೈ ಎಸ್ ಪಿ ಚೋಟು ಅಪ್ಪಯ್ಯ, ನಂದಕುಮಾರ್, ಸಂಘದ ಕಾರ್ಯ ನಿರ್ವಾಹಕ ಕಂಬೆಯಂಡ ಬೊಳ್ಯಪ್ಪ, ಪಾರುಪತ್ತೇಗಾರ್À ಪರದಂಡ ಪ್ರಿನ್ಸ್ ತಮ್ಮಯ್ಯ ಮೊದಲಾದವರು ಉಪಸ್ಥಿತರಿದ್ದರು.