ಮಡಿಕೇರಿ, ಡಿ. 6 : ಕರ್ನಾಟಕ ರಾಜ್ಯ ರಣಜಿ ತಂಡದಲ್ಲಿ ಈ ಬಾರಿ ಕೊಡಗಿನ ಯುವ ಆಟಗಾರನೋರ್ವ ಸ್ಥಾನ ಪಡೆದಿದ್ದಾನೆ. ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ಮೈಸೂರು ವಾರಿಯರ್ಸ್ ಪರ ಆಡಿದ್ದ ಬಲಗೈ ವೇಗಿ ಜಿಲ್ಲೆಯ ಕಂಡ್ರತಂಡ ಎಸ್. ದೇವಯ್ಯ (ದಿಲನ್) ಪ್ರಸಕ್ತ ಸಾಲಿನ ರಣಜಿ ಋತುವಿಗೆ ಕರ್ನಾಟಕ ತಂಡದಲ್ಲಿದ್ದಾರೆ. ಕೆಪಿಎಲ್‍ನಲ್ಲಿ ತೋರಿದ ಸಾಧನೆ ಹಾಗೂ ಈ ಮುನ್ನ ನಡೆದ ಕೆ ತಿಮ್ಮಪ್ಪಯ್ಯ ಸ್ಮಾರಕ ಪಂದ್ಯಾವಳಿಯಲ್ಲಿನ ಪ್ರದರ್ಶನದ ಮೂಲಕ ದೇವಯ್ಯ ಈ ಅವಕಾಶ ಪಡೆದಿದ್ದಾನೆ.ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡಿರುವ ದೇವಯ್ಯ ವಿವಿಧ ತಂಡಗಳ ಪರ ಆಡಿ ಗಮನ ಸೆಳೆದಿದ್ದಾನೆ. ಈತ ಅರಮೇರಿ ಕಂಡ್ರತಂಡ ಸುಬ್ಬಯ್ಯ ಹಾಗೂ ಮುತ್ತಮ್ಮ ದಂಪತಿಯ ಪುತ್ರ.