ಸುಂಟಿಕೊಪ್ಪ, ಡಿ.6: ಮಕ್ಕಳ ಸರ್ವತೋಮುಖ ಬೆಳವಣಿಗೆ, ಶಿಸ್ತು ಪ್ರತಿಭೆಯನ್ನು ಹೊರೆಗಚ್ಚಿ ಶಿಕ್ಷಣದಿಂದ ಪ್ರಗತಿ ಅಭಿವೃದ್ಧಿಯನ್ನು ತಂದು ಕೊಡುವುದುಶಿಕ್ಷಣ ಸಂಸ್ಥೆಯ ದ್ಯೇಯೋದ್ದೇಶವಾಗಿದೆ ಎಂದು ಮೈಸೂರಿನ ಧರ್ಮಾಧ್ಯಕ್ಷರು ಹಾಗೂ ಎಂಡಿಇಎಸ್ನ ಅಧ್ಯಕ್ಷ ಡಾ.ಕೆ.ಎ.ವಿಲಿಯಂ ಹೇಳಿದರು.
ಸುಂಟಿಕೊಪ್ಪ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೈಸೂರು, ಚಾಮರಾಜನಗರ,ಮಂಡ್ಯಹಾಗೂ ಕೊಡಗು ಸೇರಿದಂತೆ 150 ಶಿಕ್ಷಣ ಸಂಸ್ಥೆಯನ್ನು ಹೊಂದಿದ್ದು ಗ್ರಾಮಾಂತರ ಪ್ರದೇಶ ಮಕ್ಕಳ ಒಳಿತಾಗಿ ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಶಾಲಾ ಕಾಲೇಜುಗಳಲ್ಲಿ ಜಾತಿ, ಧರ್ಮ ಭೇಧವಿಲ್ಲದೆ ಐಕ್ಯತೆಯಿಂದ ಒಮ್ಮತದಿಂದ ಮಾನವೀಯ ಮೌಲ್ಯಗಳನ್ನು ಸಂಪನ್ನಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮೈಸೂರು ಎಂಡಿಇಎಸ್ನ ಕಾರ್ಯದರ್ಶಿ ಫಾಧರ್ ವಿಜಯಕುಮಾರ್ ಪೋಷಕರು ಮಕ್ಕಳಿಗೆ ಓದುವಾಗ ಮಾರ್ಗದರ್ಶನ ನೀಡಬೇಕು ಒಳ್ಳೆ ವಾತವರಣದಲ್ಲಿ ಮಕ್ಕಳನ್ನು ಬೆಳೆಸಿದಿದ್ದಲ್ಲಿ ಬೆಳೆಸಿದ ಮಕ್ಕಳೇ ಮುಂದಿನ ದಿನಗಳಲ್ಲಿ ಪೋಷಕರಿಗೆ ಮಾರಕವಾಗುತ್ತಾರೆ. ಉತ್ಕøಷ್ಟ ಪ್ರೀತಿ ಧಾರೆಯೆರಯುವದು ಕೇಳಿದನ್ನೆಲ್ಲಾ ಕೊಡುವುದು ಸರಿಯಲ್ಲ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಮಾನವೀಯ ಮೌಲ್ಯಗಳನ್ನು ತಿಳಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದೂ ಹೇಳಿದರು.
ವಿಟ್ಲ ಕ್ಷೇತ್ರದ ಮಾಜಿ ಶಾಸಕರೂ ಸುಂಟಿಕೊಪ್ಪ ಹಿಂದಿನ ಪುರಸಭೆ ಅಧ್ಯಕ್ಷ ಕೆ.ಎಂ. ಇಬ್ರಾಹಿಂ ಮುಖ್ಯ ಅತಿಥಿ ಸ್ತಾನದಿಂದ ಮಾತನಾಡಿ ಸಂತ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯನ್ನು ಸುಂಟಿಕೊಪ್ಪದಲ್ಲಿ ಸ್ಥಾಪಿಸಲು ಕಾರಣಿಭೂತರಾದ ಫಾಧರ್ ಫೆಲಿಕ್ಸ್ತಾವ್ರೋ ಅವರು ಅಂದಿನ ಧರ್ಮಾಧ್ಯಕ್ಷರಾದ ಮಥಾಯಿಸ್ ಅವರ ಅನುಮತಿ ಮೇರೆ ಧರ್ಮಗುರುಗಳಾದ ಫಾಧರ್ ಫೆಲಿಕ್ಸ್ತಾವ್ರೋ ಅವರು ಶಾಲೆಯನ್ನು ಆರಂಭಿಸಲು ಮುಂದಾದರು ಎಂದು ಸ್ಮರಿಸಿದರು.
ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ ಗ್ರಾಮೀಣ ಪ್ರದೇಶಲ್ಲೂ ಇಂತಹ ಶಿಸ್ತುಬದ್ಧವಾದ ಉತ್ತಮ ಕಾನ್ವೆಂಟ್ ವಿದ್ಯಾಸಂಸ್ಥೆ ಸ್ಥಾಪನೆಯಾಗಬೇಕು ಇದರಿಂದ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಇಲ್ಲಿನ ಶಿಕ್ಷಕ, ಶಿPಕ್ಷಕಿಯರ ಪರಿಶ್ರಮ ಉದಾತ್ತದ್ಯೇಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರೀನ್ ಎಸ್.ಮಚಡೋ ಮಚ್ಚಾಡೊ ಹೃದಯದಿಂದ ಬರುವ ಜ್ಞಾನವೇ ವಿವೇಕ ಶಿಕ್ಷಕರು ಶಿಲ್ಪಿ ಇದ್ದಂತೆ ಮಕ್ಕಳಲ್ಲಿ ದೈವಿಕಗುಣ, ಸನ್ಮಾರ್ಗದಲ್ಲಿ ತೊಡಗಲು ಪ್ರೇರಣಾ ಶಕ್ತಿಯಾಗುತ್ತಾರೆ. ಯಾವ ಶಿಕ್ಷಕರೂ ವಿದ್ಯಾರ್ಥಿಗಳನ್ನು ಕೆಟ್ಟದಾಗಿ ಬೆಳೆಸಲು ಪ್ರಯತ್ನಿಸುವುದಿಲ್ಲ ಎಂದು ಅವರು ಹೇಳಿದರು. ಸೋಮವಾರಪೇಟೆ ಧರ್ಮಗುರುಗಳಾದ ಫಾಧರ್ ರಾಯಪ್ಪ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್ ಮಾಶತನಾಡಿದರು.
ವೇದಿಕೆಯಲ್ಲಿ ಸುಂಟಿಕೊಪ್ಪ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರೆ.ಫಾ. ಎಡ್ವಾರ್ಡ್ ವಿಲಿಯಂ ಸಾಲ್ಢಾನ, ಎಪಿಸ್ಕೋಪಲ್ ವಿಕಾರ್ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಲೆಸ್ಲಿ ಮೋರಸ್, ಕೊಡಗು ವಲಯ ಮಟ್ಟದ ಫಾ. ಮದಲೈಮುತ್ತು, ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಸಂತ ಅಂತೋಣಿ ಶಾಲೆಯ ಮುಖ್ಯ ಶಿಕ್ಷಕಿ ವೀರಾ ಡಿಸೋಜ, ಪೊನ್ನಂಪೇಟೆ ಸಂತ ಅಂತೋಣಿ ವಿದ್ಯಾಸಂಸ್ಥೆಯ ಡೇವಿಡ್ ಸಗಾಯರಾಜ್, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್, ಶಾಲಾ ಮುಖ್ಯೋಪಾಧ್ಯಾಯ ಸೇಲ್ವರಾಜ್ ಮತ್ತಿತರರು ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವು ನೇರವೇರಿತು.