ಸೋಮವಾರಪೇಟೆ,ಡಿ.6: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀದಿ ಬದಿ ವ್ಯಾಪಾರಿಗಳ ಸಂಘದ ಚುನಾವಣೆಗೆ ವೇಳಾಪಟ್ಟಿ ನಿಗದಿಯಾಗಿದ್ದು, ತಾ. 9ರಿಂದ 13ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಈ. ಮೋಹನ್ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಸಂಘಕ್ಕೆ ಒಟ್ಟು 10 ಮಂದಿಯ ಆಯ್ಕೆ ನಡೆಯಬೇಕಿದ್ದು, ಮೂವರು ಮಹಿಳಾ ಪ್ರತಿನಿಧಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ ಪ್ರತಿನಿಧಿ, ಅಲ್ಪಸಂಖ್ಯಾತರು, ವಿಕಲಚೇತನ ವಿಭಾಗದಿಂದ ತಲಾ ಓರ್ವರು, ಸಾಮಾನ್ಯ ವರ್ಗದಿಂದ ಈರ್ವರು ಪ್ರತಿನಿಧಿಗಳ ಸ್ಥಾನಕ್ಕೆ ತಾ. 21ರಂದು ಚುನಾವಣೆ ನಡೆಯಲಿದೆ.

ತಾ. 14ರಂದು ನಾಮಪತ್ರಗಳ ಪರಿಶೀಲನೆ, ತಾ. 15ರಂದು ನಾಮಪತ್ರಗಳನ್ನು ವಾಪಸ್ ಪಡೆಯುವದು, ಅಂದು ಸಂಜೆ 5 ಗಂಟೆಗೆ ಸಿಂಧುವಾದ ನಾಮಪತ್ರಗಳ ಪ್ರಕಟಣೆ, ಅಗತ್ಯವಿದ್ದಲ್ಲಿ ತಾ. 21ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಪ.ಪಂ. ಸಭಾಂಗಣದಲ್ಲಿ ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸಲಾಗುವದು ಎಂದು ಮೋಹನ್ ತಿಳಿಸಿದ್ದಾರೆ.