ಮಡಿಕೇರಿ, ಡಿ. 5: ಕೇಂದ್ರ ಸರ್ಕಾರವು 2015-16 ರಲ್ಲಿ ಹೌಸಿಂಗ್ ಫಾರ್ ಆಲ್-ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಹೊಸ ಮನೆ ನಿರ್ಮಾಣ ಮಾಡುವವರಿಗೆ ಕೇಂದ್ರ ಸರ್ಕಾರದಿದ ರೂ. 1.5 ಲಕ್ಷ ಅನುದಾನ ದೊರೆಯಲಿದ್ದು, ಈ ಯೋಜನೆಗೆ ಜಿಲ್ಲೆಯ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಹಾಗೂ ಖಾಲಿ ನಿವೇಶನದಲ್ಲಿ ಹೊಸ ಮನೆ ನಿರ್ಮಿಸಲು ಆಸಕ್ತಿ ಇರುವವರು ತಾ. 5 ಮತ್ತು 6 ರಂದು ತಮ್ಮ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿದಾರರ ಹಾಗೂ ಕುಟುಂಬಸ್ಥರ ಆಧಾರ್ ಕಾರ್ಡ್ ಪ್ರತಿಗಳು, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ, ನಿವೇಶನದ ದಾಖಲೆಗಳು (ನಮೂನೆ-3) ಹಕ್ಕು ಪತ್ರ, ಜಮಾಬಂದಿ), 1 ಫೋಟೋ ಹಾಗೂ ಭರ್ತಿ ಮಾಡಿದ ಅರ್ಜಿ ನಮೂನೆ ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಈ ಹಿಂದೆ ಯಾವದೇ ವಸತಿ ಯೋಜನೆಯಲ್ಲಿ ಆಯ್ಕೆಯಾಗಿರಬಾರದು ಹಾಗೂ ರೂ. 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರಬಾರದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.