ಒಡೆಯನಪುರ, ಡಿ. 5: ಕೊಡಗು ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಸಹಾಯವಾಣಿ ಸಂಸ್ಥೆ ಹಾಗೂ ಸಮೀಪದ ಶನಿವಾರಸಂತೆ ಬಾಪೂಜಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ, ಮಕ್ಕಳ ಪೋಷಣೆ ರಕ್ಷಣೆ ಹಾಗೂ ಭ್ರೂಣ ಹತ್ಯೆ ಕುರಿತು ವಿಶೇಷ ಅರಿವು ಜನಜಾಗೃತಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು. ಬಾಪೂಜಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಪಟ್ಟಣದ ಕೆಆರ್‍ಸಿ ವೃತ್ತದಲ್ಲಿ ಬೀದಿ ನಾಟಕದ ಮೂಲಕ ಜನರನ್ನು ಜಾಗೃತಗೊಳಿಸಿದರು.

ಕಾರ್ಯಕ್ರಮದ ಉದ್ದೇಶದ ಕುರಿತು ಚೈಲ್ಡ್‍ಲೈನ್ ಸಂಸ್ಥೆಯ ಜಿಲ್ಲಾ ಸಂಯೋಜನಾಧಿಕಾರಿ ನವೀನ್‍ಕುಮಾರ್, ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್, ಬಾಪೂಜಿ ವಿದ್ಯಾಸಂಸ್ಥೆ ಪ್ರಾಂಶುಪಾಲೆ ವಾಣಿ, ಚೈಲ್ಡ್‍ಲೈನ್ ಸಂಸ್ಥೆಯ ತಾಲೂಕು ಕಾರ್ಯಕರ್ತರುಗಳಾದ ಬಿ.ಕೆ. ಕುಮಾರಿ, ಯೋಗೇಶ್, ಪ್ರವೀಣ್ ಹಾಗೂ ವಿದ್ಯಾಸಂಸ್ಥೆ ಶಿಕ್ಷಕರು ಹಾಜರಿದ್ದರು.