ತಾ. 7ರಂದು ಗೀತಾ ಜಯಂತಿ

ಮಡಿಕೇರಿ, ಡಿ. 4: ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ ತಾ. 7ರಂದು ಸಂಜೆ 6 ಗಂಟೆಗೆ ಗೀತಾ ಜಯಂತಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅಲ್ಲಿನ ಶ್ರೀರಾಮ ಸೇವಾ ಸಮಿತಿ, ಶ್ರೀ ಕೋದಂಡರಾಮ ದೇವಾಲಯ ಟ್ರಸ್ಟ್ ಹಾಗೂ ಜ್ಯೋತಿ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಬಂಧಿಸಿದ ಪ್ರಮುಖರು ತಿಳಿಸಿದ್ದಾರೆ.

ತಾ. 8ರಂದು ಸಂಜೆ 6.30ಕ್ಕೆ ಸನ್ನಿಧಿಯಲ್ಲಿ ಹನುಮ ಜಯಂತಿ ಹಾಗೂ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಈ ಎರಡು ವಿಶೇಷ ದಿನಗಳಲ್ಲಿ ದೇವತಾ ಕಾರ್ಯ ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.