ಮಡಿಕೇರಿ, ಡಿ. 4: ಸಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಪತಿಗಳಾದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ತಾ. 7ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗದ ಶಾಲಾ ಮೈದಾನದಲ್ಲಿ ವಾರ್ಷಿಕ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಈ ಅಭಿಯಾನದ ಕೊಡಗು ಜಿಲ್ಲಾ ಸಂಯೋಜಕ ಎಸ್.ಎಸ್. ಸಂಪತ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.