ಮಡಿಕೇರಿ, ಡಿ. 4: ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಶಿಶು ಕಲ್ಯಾಣ ಸಂಸ್ಥೆ ಮಡಿಕೇರಿ ಇಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಫಾಟನೆ ಯನ್ನು ನೂರುನ್ನೀಸಾ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರ ಮಡಿಕೇರಿ ಇವರು ನೆರವೇರಿಸಿ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದ ಪ್ರಯುಕ್ತ 5 ರಿಂದ 16 ವರ್ಷದ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವನ್ನು ವಿತರಿಸಲಾಯಿತು. ಕಾರ್ಯಕ್ರಮದ ತೀರ್ಪುಗಾರರಾಗಿ ಭಾರತಿ ರಮೇಶ್ ಹಾಗೂ ಪ್ರೇಮ ರಾಘವಯ್ಯ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೂರ್ಗ್ ನೋಟಿ ಕಿಡ್ಸ್, ಸುಂಟಿಕೊಪ್ಪ ತಂಡದವರಿಂದ ಕನ್ನಡಕ್ಕೆ ಸಂಬಂಧಿ ಸಿದ ನೃತ್ಯ ಪ್ರದರ್ಶನ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಅರುಂಧತಿ, ಉಪನಿರ್ದೇಶಕರು, ಜಯಂತಿ, ಮೇಲ್ವಿಚಾರಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸೋಮವಾರಪೇಟೆ, ಅಣ್ಣಯ್ಯ, ಸಹಾಯಕ ಶಿಶು ಅಭಿವೃದ್ಧಿ ಯೋಜ ನಾಧಿಕಾರಿಗಳು, ಸೋಮವಾರಪೇಟೆ ಹಾಗೂ ಬಾಲಕಿಯರ ಬಾಲ ಮಂದಿ ರದ ಸಿಬ್ಬಂದಿಗಳು, ಬಾಲಕರ ಬಾಲ ಮಂದಿರದ ಸಿಬ್ಬಂದಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತ ರಿದ್ದರು. ಸೂರಜ್, ಸಿಬ್ಬಂದಿ, ಸರ್ಕಾರಿ ಬಾಲಕರ ಬಾಲಮಂದಿರ ಮಡಿಕೇರಿ ಇವರು ನಿರೂಪಿಸಿ, ವಂದಿಸಿದರು.