ಮಡಿಕೇರಿ, ಡಿ. 5: ಮಹಿಳೆಯರ ಭದ್ರತೆಯನ್ನು ಸರಕಾರಗಳು ತನ್ನ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‍ಮೆಂಟ್‍ನ ಕೊಡಗು ಜಿಲ್ಲಾ ಘಟಕ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ವುಮೆನ್ ಇಂಡಿಯಾ ಮೂವ್‍ಮೆಂಟ್‍ನ ಜಿಲ್ಲಾಧ್ಯಕ್ಷೆ ನಫೀಸ ಅಡ್ಕಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ವುಮೆನ್ ಇಂಡಿಯಾ ಮೂಮೆಂಟ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಫೀಸ ಅಕ್ಬರ್, ಸದಸ್ಯರಾದ ತನುಜ, ಜಯ ಬ್ಯಾಡಗೊಟ್ಟ, ಮೇರಿ ವರ್ಗೀಸ್, ಎನ್.ಡಬ್ಲ್ಯು.ಎಫ್. ನಗರಾಧ್ಯಕ್ಷೆ ಜಾಂಕಿಯಾ ಹುರೈರ ಮೊದಲಾದವರು ಪಾಲ್ಗೊಂಡಿದ್ದರು.