ಸೋಮವಾರಪೇಟೆ, ಡಿ. 5: ಬಾಬರಿ ಮಸೀದಿ ಧ್ವಂಸದ ದಿನವಾದ ಡಿ. 6ರಂದು ಕೆಲ ಸಂಘಟನೆಗಳು ವಿಜಯೋತ್ಸವ-ಕರಾಳ ದಿನಾಚರಣೆ ಯನ್ನು ಈವರೆಗೆ ಆಚರಿಸಿಕೊಂಡು ಬಂದಿದ್ದು, ಪ್ರಸಕ್ತ ವರ್ಷ ಯಾವದೇ ಕಾರಣಕ್ಕೂ ಸಾರ್ವಜನಿಕರು ಶಾಂತಿ ಭಂಗವಾಗುವ ಕೃತ್ಯದಲ್ಲಿ ತೊಡಗಬಾರದು ಎಂದು ಡಿವೈಎಸ್‍ಪಿ ಮುರುಳೀಧರ್ ಕರೆ ನೀಡಿದರು.
ಇಲ್ಲಿನ ಪೊಲೀಸ್ ಠಾಣೆಯ ಆಶ್ರಯದಲ್ಲಿ ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಾಗಿದ್ದು, ಕಾನೂನು ಪಾಲನೆಗೆ ಎಲ್ಲರೂ ಮುಂದಾಗಬೇಕು ಎಂದರು.
ಸಭೆಯಲ್ಲಿ ಠಾಣಾಧಿಕಾರಿ ಶಿವಶಂಕರ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ನಗರಾಧ್ಯಕ್ಷ ಸೋಮೇಶ್, ಪ.ಪಂ. ಸದಸ್ಯ ಪಿ.ಕೆ ಚಂದ್ರು, ಬಿ.ಆರ್. ಮಹೇಶ್, ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗಂಗಾಧರ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಬೇಳೂರು ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್, ಪ್ರಮುಖರಾದ ದಾಮೋಧರ್, ಇಬ್ರಾಹಿಂ, ಹ್ಯಾರೀಸ್, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.