ಸುಂಟಿಕೊಪ್ಪ, ಡಿ. 4: ಮಾದಾಪುರ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಎಜುಕೇಷನ್ ಸೊಸೈಟಿ ವತಿಯಿಂದ ತಾ. 5 ರಂದು (ಇಂದು) ವಾರ್ಷಿಕ ಕ್ರೀಡೋತ್ಸವ ಹಾಗೂ ತಾ. 7 ರಂದು ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.

ಡಿ. ಚೆನ್ನಮ್ಮ ಜೂನಿಯರ್ ಕಾಲೇಜಿನ ವಾರ್ಷಿಕ ಕ್ರೀಡೋತ್ಸವ ಸಮಾರಂಭವನ್ನು ಬೆಳಿಗ್ಗೆ 10 ಗಂಟೆಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಚೌರೀರ ಜಗತ್ ತಿಮ್ಮಯ್ಯ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ಸಂಜೆ 3 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ. ನಂದ ಆಗಮಿಸಲಿದ್ದಾರೆ.

ತಾ. 7 ರಂದು ವಾರ್ಷಿಕೋತ್ಸವ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಶಾಲಾ ಮೈದಾನದಲ್ಲಿ ಅತಿಥಿಗಳ ಆಸನ ಸ್ವೀಕಾರ, ಎನ್‍ಸಿಸಿ ಪಥಸಂಚಲನ ಮತ್ತು ಗೌರವರಕ್ಷೆ, ವಿದ್ಯಾರ್ಥಿಗಳಿಂದ ಪಿರಮಿಡ್ ಪ್ರದರ್ಶನ, ವಿದ್ಯಾರ್ಥಿನಿ ಯರಿಂದ ನೃತ್ಯ ಪ್ರದರ್ಶನ, ಸಾಮೂಹಿಕ ಅಂಗ ಸಾಧನೆ ನಡೆಯಲಿದೆ.

ಪೂರ್ವಾಹ್ನ 11.10 ಗಂಟೆಗೆ ನಡೆಯಲಿರುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಪಾಲ್ಗೊಳ್ಳಲಿದ್ದಾರೆ ಎಂದು ಕಾಲೇಜು ಎಜುಕೇಷನ್ ಸೊಸೈಟಿ ಪದಾಧಿಕಾರಿಗಳು ಹಾಗೂ ಪ್ರಾಂಶುಪಾಲರು ತಿಳಿಸಿದ್ದಾರೆ.