ವೀರಾಜಪೇಟೆ, ಡಿ. 4: ವೀರಾಜಪೇಟೆ ಚೆಸ್ಕಾಂ ಇಲಾಖೆ ಗ್ರಾಹಕರನ್ನು ಶೋಷಣೆ ಮಾಡುತ್ತಿ ರುವದರ ವಿರುದ್ಧ ಶಿವರಾಮೇಗೌಡ ಬಣದ ತಾಲೂಕು ಹಾಗೂ ನಗರ ಸಮಿತಿಯ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಇಂದು ಇಲ್ಲಿನ ಚೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಸಹಾಯಕ ಅಭಿಯಂತರ ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಿ.ಪಿ.ಎಂ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಚೆಸ್ಕಾಂ ವರ್ತನೆಯನ್ನು ಖಂಡಿಸಿದರು.

ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಸಂತೋಷ್, ನಗರ ಸಮಿತಿಯ ಅಧ್ಯಕ್ಷ ಅವಿನಾಶ್, ಉಪಾಧ್ಯಕ್ಷ ಫೈಜಲ್, ಖಜಾಂಚಿ ತಬರೀಸ್ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.