ವೀರಾಜಪೇಟೆ, ನ. 4: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದೂ ಪರಿಷತ್, ಭಜರಂಗದಳ ತಾಲೂಕು ಘಟಕ ಮತ್ತು ದುರ್ಗಾವಾಹಿನಿ ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಅಶ್ರಯದಲ್ಲಿ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದÀರ್ಶಿ ಡಿ. ನರಸಿಂಹ ಅವರು ಮಾತನಾಡಿ, ಅತ್ಯಾಚಾರಿ ಗಳನ್ನು ಗಲ್ಲಿಗೇರಿಸುವಂತಹ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿದರು.
ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಅಂಬಿಕಾ ಉತ್ತಪ್ಪ ಮಾತನಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘಚಾಲಕ್ ಪ್ರಿನ್ಸ್ ಗಣಪತಿ ಮಾತನಾಡಿ, ಇಂತಹ ಅನ್ಯಾಯದ ವಿರುದ್ಧ ಸಮಾಜ ಧ್ವನಿ ಎತ್ತಬೇಕೆಂದರು.
ಅತ್ಯಾಚಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅತ್ಯಾಚಾರಿಯ ಪ್ರತಿಕೃತಿ ದಹಿಸಿದ ಬಳಿಕ ವೀರಾಜಪೇಟೆ ತಹಶೀಲ್ದಾರ್ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಟಾಟಾ ಬೋಪಯ್ಯ, ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಎನ್.ಕೆ. ಅಜಿತ್‍ಕುಮಾರ್, ಭಜರಂಗದಳ ತಾಲೂಕು ಸಂಚಾಲಕ್ ವಿವೇಕ್ ರೈ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಕಂಠಿ ಕಾರ್ಯಪ್ಪ, ದುರ್ಗಾವಾಹಿನಿಯ ವಿಕಿತ ವಿಜಯ್, ಹೇಮಂತ್ ತಾಲೂಕು ಕಾರ್ಯದÀರ್ಶಿ ಬಿ.ಎಂ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿ ಸುಬ್ರಮಣಿ ವಿಜು ಸುಬ್ರಮಣಿ, ಮಧು, ತಾಲೂಕು ಯುವ ಮೊರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ ಮತ್ತು ವಿಶ್ವ ಹಿಂದೂ ಪರಿಷತ್, ಭಜರಂಗದಳ ದುರ್ಗಾವಾಹಿನಿ ಮತ್ತು ಭಾ.ಜ.ಪ. ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.