ಕೂಡಿಗೆ, ಡಿ. 4: ಕುಶಾಲನಗರ- ಹಾಸನ ಮುಖ್ಯ ರಸ್ತೆಯ ಕೂಡ್ಲೂರಿನ ಯೂನಿಕ್ ಎಬಿಸಿ ಮಾಂಟೇಸ್ಸರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೆÇೀಷಕರಿಗೆ ಶಾಲಾ ಶುಲ್ಕ ಬಾಕಿಯಿದೆ, ಶುಲ್ಕ ಕಟ್ಟದಿದ್ದಲ್ಲಿ, ಪರೀಕ್ಷೆಗೆ ಕೂರಿಸುವದಿಲ್ಲ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ. ಈ ವಿಷಯವಾಗಿ ವಿದ್ಯಾರ್ಥಿಗಳ ಪೋಷಕರಿಗೂ ಹಾಗೂ ಶಾಲಾ ಆಡಳಿತ ಮಂಡಳಿ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆ ನಡೆದಿದೆ.

ಶಿಕ್ಷಕರು ವಿದ್ಯಾರ್ಥಿಗಳೊಂದಿಗೂ ಹೇಳಿ ಕಳುಹಿಸುತ್ತಿದ್ದು, ಅಲ್ಲದೆ, ಪೋಷಕರಿಗೂ ಕರೆ ಮಾಡಿ ತಿಳಿಸಿದ್ದರೂ, ಪೋಷಕರು ಶಾಲಾ ಶುಲ್ಕ ಕಟ್ಟಲು ಮುಂದಾಗದಿರುವದಕ್ಕೆ ಶಿಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸುವದಿಲ್ಲ ಎಂದು ತಿಳಿಸಿದ ಕಾರಣ ಪೆÇೀಷಕರು ಶಾಲೆಯ ಬಳಿ ಜಮಾಯಿಸಿ, ಶಾಲಾ ಶಿಕ್ಷಕರನ್ನು, ಸಿಬ್ಬಂದಿಗಳನ್ನು ಪ್ರಶ್ನೆ ಮಾಡಿ ಮಾತಿನ ಚಕಮಕಿ ನಡೆಸಿದ್ದಾರೆ.

ಶಾಲೆಯ ವ್ಯವಸ್ಥಾಪಕ ರವಿ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಕಟ್ಟಲು ಬಾಕಿಯಿರುವ ಪೋಷಕರಿಗೆ ಕರೆ ಮಾಡಿ ಹಾಗೂ ಸಂದೇಶವನ್ನು ಕಳುಹಿಸಿದರೂ ಪೋಷಕರು ಯಾವದೇ ರೀತಿಯಲ್ಲೂ ಸ್ಪಂದಿಸಿಲ್ಲ. ಆದ ಕಾರಣ ಶುಲ್ಕ ಕಟ್ಟದಿದ್ದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸುವದಿಲ್ಲ ಎಂದು ತಿಳಿಸಿದೆವು. ಆದರೆ, ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಸಲಾಗಿದೆ. ಆದರೂ ಸಹ ಕೆಲ ಪೋಷಕರು ತಮ್ಮ ಕರ್ತವ್ಯವನ್ನು ಮರೆತು ಶಿಕ್ಷಕರೊಂದಿಗೆ, ಆಡಳಿತ ಮಂಡಳಿಯೊಂದಿಗೆ ಕೂಗಾಡಿ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಶುಲ್ಕವನ್ನು ಪಾವತಿಸಿದ್ದಾರೆ ಎಂದು ತಿಳಿಸಿದರು.

ಪೋಷಕರ ದೂರಿನನ್ವಯ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.