ಕೂಡಿಗೆ, ಡಿ. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೈಗಾರಿಕಾ ಬಡಾವಣೆ ಕಂದಾಯ ವಸೂಲಾತಿ ಬಗ್ಗೆ ಚರ್ಚೆ ನಡೆಯಿತು.

ಸದಸ್ಯರು ತಮ್ಮ ತಮ್ಮ ವಾರ್ಡ್‍ನ ಕಾಮಗಾರಿಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಶುಚಿತ್ವ ಮತ್ತು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ಶುಚಿತ್ವ ಮತ್ತು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಸದಸ್ಯರ ಸಲಹೆಯಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವದು ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಸಭೆಗೆ ಸರಕಾರದ ಯೋಜನೆಯ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ, ಸದಸ್ಯರುಗಳಾದ ಮಹೇಶ್ ಕಾಳಪ್ಪ, ಸುರೇಶ್, ರಮೇಶ, ಮಂಜುನಾಥ, ಈರಪ್ಪ, ಜಯಮ್ಮ, ಸಾವಿತ್ರಿರಾಜು, ಪಾರ್ವತಮ್ಮ, ಸೋಮಾಚಾರಿ, ಶ್ರೀನಿವಾಸ, ಭಾಸ್ಕರ್ ನಾಯಕ, ಸವಿತಾ, ಹರಿಶ್ರೀ, ಅಶ್ವಿನಿ, ಶೇಖರ್ ಹಾಗೂ ಕಾರ್ಯದರ್ಶಿ ಮಾದಪ್ಪ ಹಾಜರಿದ್ದರು.