ಮಡಿಕೇರಿ, ಡಿ. 5: ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದ ಸೌಲಭ್ಯ, ಅಸಂಘಟಿತ ಕಾರ್ಮಿಕ ವರ್ಗದ ಕಾರ್ಮಿಕರ ನೋಂದಣಿ, ವಾಹನ ಚಾಲಕರಿಗೆ ಸಿಗುವ ಸೌಲಭ್ಯ ಮತ್ತು ಆಶಾದೀಪ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಾದ್ಯಂತ ಪ್ರಚಾರ ಮಾಡಲು ಮತ್ತು ನೋಂದಣಿ ಮಾಡಿಸಲು ಕಮಿಷನ್ ಆಧಾರದ ಮೇಲೆ ಕೆಲಸ ನಿರ್ವಹಿಸಲು ಗ್ರಾಮ ಪಂಚಾಯಿತಿವಾರು ಹಾಗೂ ನಗರ ಪ್ರದೇಶದಲ್ಲಿ ವಾರ್ಡ್‍ವಾರು ಕೆಲಸ ನಿರ್ವಹಿಸಲು ಆಸಕ್ತಿ ಇರುವ ಹಾಗೂ 21 ರಿಂದ 31 ವರ್ಷದೊಳಗಿನ ವಯೋಮಿತಿ ಇರುವ ಅಭ್ಯರ್ಥಿಗಳು ತಾಲೂಕು ಮಟ್ಟದಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ತಾ. 10 ರೊಳಗೆ ಅರ್ಜಿ ಸಲ್ಲಿಸಲು ಕೋರಿದೆ.

ಕಾರ್ಮಿಕ ಬಂಧುಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು: ಕಾರ್ಮಿಕ ಬಂಧುವಿನ ಕನಿಷ್ಟ ವಿದ್ಯಾರ್ಹತೆ ಅಂಗೀಕೃತ ಶೈಕ್ಷಣಿಕ ಸಂಸ್ಥೆ/ ಮಂಡಳಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ನಿರುದ್ಯೋಗಿ ಅಸಂಘಟಿತ ಕಾರ್ಮಿಕರನ್ನು ಸಹ ಪರಿಗಣಿಸಲಾಗುವದು. ಕಾರ್ಮಿಕ ಬಂಧುವಾಗಿ ಆಯ್ಕೆಯಾಗುವವರು ಗ್ರಾಮ ಪಂಚಾಯಿತಿ, ಪಟ್ಟಣದ ವ್ಯಾಪ್ತಿಯಲ್ಲಿ ನೆಲೆಸಿದವರಾಗಿರಬೇಕು. ಕನಿಷ್ಟ 21 ವರ್ಷ ಮತ್ತು ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ದ್ವಿಚಕ್ರ ವಾಹನ, ಡ್ರೈವಿಂಗ್ ಲೈಸೆನ್ಸ್ ಮತ್ತು ಸ್ಮಾರ್ಟ್ ಫೋನ್ ಹೊಂದಿರಬೇಕು ಹಾಗೂ ಕನಿಷ್ಟ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕಮೀಷನ್ ಆಧಾರದ ಮೇಲೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಸಿದ್ದವಿರಬೇಕು.