ಗೋಣಿಕೊಪ್ಪ ವರದಿ, ಡಿ. 4: ಕುಂದ ಬೊಟ್ಯತ್ನಾಡ್ ಸ್ಪೋರ್ಟ್ ಅಸೋಸಿಯೇಷನ್ ವತಿಯಿಂದ ಹಾಕಿಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ತಾ. 25 ರಿಂದ 29 ರವರೆಗೆ ಬೊಟ್ಯತ್ನಾಡ್ ಆಹ್ವಾನಿತ ಹಾಕಿ ಟೂರ್ನಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶ್ರೀಮಂತ್ ಮುತ್ತಣ್ಣ ತಿಳಿಸಿದ್ದಾರೆ.
ಅಸೋಸಿಯೆಷನ್ ವತಿಯಿಂದ ಮೊದಲ ಬಾರಿಗೆ ಹಾಕಿ ಟೂರ್ನಿ ಆಯೋಜಿಸಲಾಗಿದ್ದು, ಕೊಡಗಿನ ಪ್ರಮುಖ 16 ತಂಡಗಳು ಭಾಗವಹಿಸುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ತಂಡದಲ್ಲಿ 5 ಅತಿಥಿ ಆಟಗಾರರು ಪಾಲ್ಗೊಳ್ಳಲಿದ್ದು, ಹೆಚ್ಚು ಸ್ಪರ್ಧಾತ್ಮಕ ಆಟ ಮೂಡಿಬರುವ ವಿಶ್ವಾಸವಿದೆ. ತಂಡಗಳಾದ ಕೋಣನಕಟ್ಟೆ ಇಲೆವೆನ್, ಬೊಟ್ಯತ್ನಾಡ್ ಸ್ಪೋಟ್ರ್ಸ್ ಕ್ಲಬ್, ಯುನೈಟೆಡ್ ಮರ್ಕರಾ, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಕಿರುಗೂರು, ಬ್ಲೂಸ್ಟಾರ್ ಪೊದ್ದ್ಮಾನಿ, ಕಿರುಗೂರು ಸ್ಪೋಟ್ರ್ಸ್ ಕ್ಲಬ್, ಚಾರ್ಮರ್ಸ್ ಮಡಿಕೇರಿ, ಮಲೆನಾಡ್, ಬೇಗೂರು ಈಶ್ವರ ಸ್ಪೋಟ್ರ್ಸ್, ಸೋಮವಾರಪೇಟೆ ಡಾಲ್ಪಿನ್ಸ್, ಡ್ರಿಬ್ಲ್ ಹೆಂಪ್, ವೀರಾಜಪೇಟೆ ಕೊಡವ ಸಮಾಜ, ನಾಪೋಕ್ಲು ಶಿವಾಜಿ, ವೀರಾಜಪೇಟೆ ಎಫ್ಎಂಸಿ, ಬಲಮುರಿ ಮಹಾದೇವ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ 8277235470, 9480703687 ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಸಣ್ಣುವಂಡ ಲೋಕೇಶ್, ಸದಸ್ಯರಾದ ಹರೀಶ್, ತೀತಮಾಡ ಶರಣು, ಅಮಿತ್ ಉತ್ತಪ್ಪ ಇದ್ದರು.