ವೀರಾಜಪೇಟೆ, ಡಿ. 4: ವೀರಾಜಪೇಟೆ ಬಳಿಯ ಕೆ.ಬೋಯಿಕೇರಿಯಿಂದ ವೀರಾಜಪೇಟೆ ಕಡೆಗೆ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ 25000 ಮೌಲ್ಯದ ಸುಮಾರು 1 ಕೆ.ಜಿ. ಗಾಂಜಾವನ್ನು ಆಟೋ ರಿಕ್ಷಾ ಸಮೇತ ಇಲ್ಲಿನ ನಗರ ಪೊಲೀಸರು ವಶ ಪಡಿಸಿಕೊಂಡು ಆಟೋ ರಿಕ್ಷಾದಲ್ಲಿದ್ದ ಎಂ.ಶಾಫಿ ಎಂಬುವನನ್ನು ಬಂಧಿಸಿದ್ದಾರೆ.
ಖಚಿತ ಸುಳಿವಿನ ಮೇರೆ ನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮರಿಸ್ವಾಮಿ ಹಾಗೂ ಸಿಬ್ಬಂದಿಗಳಾದ ಮುನೀರ್, ಗಿರೀಶ್ ಇಲ್ಲಿನ ಚಿಕ್ಕಪೇಟೆ ಬಳಿ ಇಂದು ಅಪರಾಹ್ನ ಆಟೋ ರಿಕ್ಷಾವನ್ನು ತಪಾಸಣೆ ನಡೆಸಿದಾಗ ಈ ಅಕ್ರಮ ಗಾಂಜಾ ಪತ್ತೆಯಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.