ಗೋಣಿಕೊಪ್ಪ ವರದಿ, ಡಿ. 5: ಮೈಸೂರು ಎನ್.ಐ. ಕಾಲೇಜಿನಲ್ಲಿ ಇಂಟರ್ನ್ಯಾಷನಲ್ ಮೆಬ್ಯುಕನ್ ಗೊಜು-ರ್ಯೂ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಮುಕ್ತ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕೊಡಗಿನ ಕ್ರೀಡಾಪಟುಗಳು ಪದಕ ಗಳಿಸಿದ್ದಾರೆ.
ಕರಾಟೆಪಟು ಅರುಣ್ ಮಾಚಯ್ಯ ನೇತೃತ್ವದ ಜೆನ್ ಶಿಟಾರಿಯೋ ಕರಾಟೆ ಶಾಲೆಯ ಆರು ಕರಾಟೆ ಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಪದಕ ಗಿಟ್ಟಿಸಿಕೊಂಡಿದ್ದಾರೆ. ರಿಶಲ್ ಗಣಪತಿಗೆ ಚಿನ್ನ ಮತ್ತು ಬೆಳ್ಳಿ, ಕೆ.ಜಿ. ಉತ್ತಪ್ಪನಿಗೆ ಚಿನ್ನ ಮತ್ತು ಕಂಚು, ತನ್ಮಯ್ ಮೊಣ್ಣಪ್ಪ ಅವರಿಗೆ ಚಿನ್ನ, ಸಾನ್ವಿ ಮುತ್ತಕ್ಕ, ಶಾನ್ ನಂಜಪ್ಪಗೆ ಕಂಚು, ಕೆ.ಎಂ. ಮುತ್ತಮ್ಮ ಅವರಿಗೆ 2 ಕಂಚಿನ ಪದಕ ಲಭಿಸಿದೆ. ಇವರಿಗೆ ಕಿಶೋರ್ ತರಬೇತಿ ನೀಡಿದ್ದಾರೆ.