ಮಡಿಕೇರಿ, ಡಿ. 5: ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ಉತ್ಸವದ ಅಂಗವಾಗಿ ಇತ್ತೀಚೆಗೆ ಗಾಳಿಬೀಡಿನ ಜವಹರ್ ನವೋದಯ ವಿದ್ಯಾಲಯದ ಮಕ್ಕಳಿಂದ ಸ್ವಚ್ಛತಾ ಜಾಗೃತಿ ಜಾಥಾವನ್ನು ಆಯೋಜಿಸಲಾಗಿತ್ತು. ನವೋದಯ ವಿದ್ಯಾಲಯದಿಂದ ಆರಂಭಗೊಂಡ ಈ ನಡಿಗೆ ಗಾಳಿಬೀಡಿನ ಪ್ರಾಥಮಿಕ ಶಾಲೆಯನ್ನು ತಲಪಿ ಅಲ್ಲಿನ ಮಕ್ಕಳಿಗೆ ಸ್ವಚ್ಛತೆಯ ಕುರಿತು ತಿಳುವಳಿಕೆ ನೀಡಲಾಯಿತು. ಮಕ್ಕಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕೆಂದು ಶಾಲೆಯ ಮಕ್ಕಳಾದ ಯತಿನ್ ಮತ್ತು ಯುಕ್ತಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು. ಗಾಳಿಬೀಡು ಶಾಲೆಯ ಮಕ್ಕಳಿಗೆ ಹೆಚ್ಚಿನ ಓದನ್ನು ಪ್ರೋತ್ಸಾಹಿಸುವ ಸಲುವಾಗಿ ಕಥೆ-ಕವಿತೆಗಳ ಪುಸ್ತಕಗಳನ್ನುವಿತರಿಸಲಾಯಿತು. ಈ ನಡಿಗೆಯಲ್ಲಿ ಶಿಕ್ಷಕರಾದ ಮಾರುತಿ ದಾಸಣ್ಣವರ, ಸುರೇಶ, ಬಸವರಾಜು, ಗ್ರಂಥಪಾಲಕರಾದ ಜಯನ್ ಮತ್ತು ಗೀತಾ ಭಾಗವಹಿಸಿದ್ದರು.