ಕುಶಾಲನಗರ, ಡಿ. 4: ಸುಂದರನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಘಟಕದಲ್ಲಿ ಅವಧಿ ಮೀರಿದ ಮದ್ಯವನ್ನು ನಾಶಪಡಿಸುವ ಕಾರ್ಯ ನಡೆಯಿತು.
ಅಬಕಾರಿ ಇಲಾಖೆಯ ಸೋಮವಾರಪೇಟೆ ತಾಲೂಕು ಉಪ ಅಧೀಕ್ಷಕ ಶಿವಪ್ಪ ಅವರ ನೇತೃತ್ವದಲ್ಲಿ ಅವಧಿ ಮೀರಿ ಬಳಕೆಗೆ ಉಪಯುಕ್ತವಲ್ಲದ 651 ಬಾಕ್ಸ್ ಬೀಯರ್, 34 ಕೇಸ್ ಪ್ರಮಾಣದ ಹಳೆ ಮದ್ಯವನ್ನು ಗುಂಡಿಗೆ ಸುರಿದು ನಾಶಪಡಿಸಲಾಯಿತು.
ಈ ಸಂದರ್ಭ ಘಟಕದ ಮೇಲುಸ್ತುವಾರಿ ಅಧಿಕಾರಿಗಳಾದ ಸೋಮವಾರಪೇಟೆ ತಾಲೂಕು ಅಬಕಾರಿ ನಿರೀಕ್ಷಕ ನಟರಾಜು, ತಾಲೂಕು ಅಧಿಕಾರಿ ಅಪೂರ್ವ, ರಕ್ಷಕ ವೀರೇಶ್, ಘಟಕದ ವ್ಯವಸ್ಥಾಪಕ ವಿಠಲ ಕದಂ ಮತ್ತು ಸಿಬ್ಬಂದಿ ಇದ್ದರು.