ಕೂಡಿಗೆ, ಡಿ. 3: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ರಾಜ್ಯೋತ್ಸವ ಶಿಕ್ಷಕ ಪುರಸ್ಕಾರ-2019 ಸಮಾರಂಭದಲ್ಲಿ ಕಣಿವೆ ಗ್ರಾಮದ ಕೆ.ಎಸ್. ನಳಿನಿ ಅವರು ಬರೆದ ಮಕ್ಕಳ ಕಥಾ ಸಂಕಲನ ತಾಮ್ರಕರ್ಣಿ ಪುಸ್ತಕವನ್ನು ಬಿಡಗಡೆ ಮಾಡಲಾಯಿತು. ಪುಸ್ತಕದ ಲೇಖಕಿ ಕೆ.ಎಸ್. ನಳಿನಿ ಅವರು ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಇವರ ಲೇಖನಗಳು ವೃತ್ತ ಪತ್ರಿಕೆಗಳಲ್ಲಿ ಪ್ರಕಟಿತಗೊಂಡಿವೆ.