ವೀರಾಜಪೇಟೆ, ಡಿ. 3: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಗರದ ಯುವಕ ಸಂಘವು ಮುಕ್ತ ಕಾಲ್ಚೇಂಡು ಪಂದ್ಯಾಟ ಆಯೋಜಿಸಿದೆ.

ವೀರಾಜಪೇಟೆ ನಗರದ ನೆಹರು ನಗರದ ನವಜ್ಯೋತಿ ಯುವಕ ಸಂಘವು ತನ್ನ 30 ವರ್ಷದ ವಾರ್ಷಿಕೊತ್ಸವದ ಪ್ರಯುಕ್ತ 4ನೇ ವರ್ಷದ ಪುರುಷರ ಮುಕ್ತ ಟೈಗರ್ ಫೈ ಎಸೈಡ್ ಕಾಲ್ಚೆಂಡು ಪಂದ್ಯಾಟವನ್ನು ನಗರದ ತಾಲೂಕು ಮೈದಾನದಲ್ಲಿ ತಾ. 14 ರಂದು ಆಯೋಜಿಸಿದೆ. ಯುವಕ ಸಂಘವು ಸಾಮಾಜಿಕ, ಶೈಕ್ಷಣಿಕ ಮತ್ತು ಕ್ರೀಡೆಗೆ ಪ್ರಮುಖ್ಯತೆಯನ್ನು ನೀಡಿ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ತಾ. 15 ರಂದು ಪಂದ್ಯಾಟ ಮುಕ್ತಾಯಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎನ್. ರವಿ ಮಾಹಿತಿ ನೀಡಿದರು.

ಹೆಸರು ನೋಂದಾಯಿಸಿಕೊಳ್ಳಲು ತಾ. 9 ಅಂತಿಮ ದಿನಾಂಕವಾಗಿದೆ. ವಿಜೇತ ತಂಡಕ್ಕೆ ಟ್ರೋಫಿ ಮತ್ತು ನಗದು ಮತ್ತು ಉತ್ತಮ ಆಟಗಾರರಿಗೆ ವೈಯಕ್ತಿಕ ಟ್ರೋಫಿ ನೀಡಿ ಗೌರವಿಸಲಾಗುತ್ತದೆ. ಪಂದ್ಯಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಲು 9483835518, 9844558535, 9902650035, ಮತ್ತು 9902307529 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಘದ ಕಾರ್ಯದರ್ಶಿ ಶ್ರೀಜಿತ್ ತಿಳಿಸಿದ್ದಾರೆ.