ಮಡಿಕೇರಿ, ಡಿ. 3: ಮಡಿಕೇರಿ ಕೊಡವ ಸಮಾಜದ ವತಿಯಿಂದ ಹುತ್ತರಿ ಹಬ್ಬದ ಅಂಗವಾಗಿ ಸಂಪ್ರದಾಯದಂತೆ ಈ ಬಾರಿ ತಾ. 7 ರಿಂದ ‘ಪುತ್ತರಿ ಈಡ್’ ಕಾರ್ಯಕ್ರಮ ಜರುಗಲಿದೆ. ತಾ. 7 ರಿಂದ 9ರವರೆಗೆ ಪ್ರತಿದಿನ ಸಂಜೆ ನಗರದ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಮಂದ್‍ನಲ್ಲಿ ಈ ಕಾರ್ಯ ವರ್ಷಂಪ್ರತಿಯಂತೆ ಜರುಗಲಿದೆ.

ತಾ. 22 ರಂದು ಊರೊರ್ಮೆ

ಸಮಾಜದ ವತಿಯಿಂದ ತಾ. 22 ರಂದು ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ ಕಾರ್ಯಕ್ರಮ ನಿಗದಿಯಾಗಿದೆ. ಸಮಾಜದ ಉಪಾಧ್ಯಕ್ಷ ಚೋವಂಡ ಡಿ. ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರದ ಹಿರಿಯ ದಂತವೈದ್ಯ ಮೂಡೆರ ಅನಿಲ್ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಂದ್‍ನಲ್ಲಿ ಕೋಲಾಟ ಜರುಗಲಿದೆ.