ಮಡಿಕೇರಿ, ಡಿ. 3: ಕರ್ನಾಟಕ ಪಶು ವೈದ್ಯಕೀಯರ ಸಂಘದ ಜಿಲ್ಲಾ ಘಟಕದಿಂದ ನ. 27ರಂದು ತೆಲಂಗಾಣದಲ್ಲಿ ಪಶುವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಅವರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸುವಂತೆ ಕೋರಿ ತೆಲಂಗಾಣ ಸರ್ಕಾರವನ್ನು ಆಗ್ರಹಿಸುತ್ತಾ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಗರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಎದುರು ‘‘ಮಾತನಾಡದೆ ಇರುವ ಪ್ರಾಣಿಗಳ ಅರಿಯುವ ನೀನು, ಮಾತನಾಡುವ ಪ್ರಾಣಿಗಳ ಕಾಮಕ್ಕೆ ಬಲಿಯಾದೆಯಾ’’ ಎಂಬ ಬರಹದ ವಸ್ತ್ರ ಫಲಕವನ್ನು ಪ್ರದರ್ಶಿಸಲಾಯಿತು.