ಕುಶಾಲನಗರ, ಡಿ. 3: ಕುಶಾಲನಗರದ ಕಾವೇರಿ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಬಿಎಸ್‍ಆರ್ ಸ್ಪೋಟ್ರ್ಸ್ ಕ್ಲಬ್ ಶಟಲ್ ಕಾಕ್ ಕ್ರೀಡಾಂಗಣವನ್ನು ಪಟ್ಟಣ ಪಂಚಾಯಿತಿ ಸದಸ್ಯ ಬಿ. ಅಮೃತರಾಜು ಉದ್ಘಾಟಿಸಿದರು.

ಕ್ಲಬ್ ಅಧ್ಯಕ್ಷ ಡಿ.ಎಸ್. ಜಗದೀಶ್, ಕ್ಲಬ್‍ನ ಕ್ರೀಡಾ ಸಂಯೋಜಕ ಕೆ.ಎಸ್. ಮೂರ್ತಿ, ಹಿರಿಯ ಆಟಗಾರ ಚೌಡ್ಲು ಕಾಳಪ್ಪ, ಡಿ.ಎನ್. ಚಂದ್ರಶೇಖರ, ಮಹೇಶ್, ರಾವಲ್, ಧ್ರುವಿಲ್, ಕೃಷ್ಣ, ರಂಗಸ್ವಾಮಿ, ಎಂ. ಅಬೂಬಕರ್, ಬೈತಡ್ಕ ಕೇಶವ, ಎಂ. ರಘು, ಗೋವಿಂದರಾಜು ಇದ್ದರು.