ಗೋಣಿಕೊಪ್ಪ ವರದಿ, ಡಿ. 3: ಇಲ್ಲಿನ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಅಗ್ನಿಶಾಮಕ ದಳದ ವತಿಯಿಂದ ಆಕಸ್ಮಿಕ ಬೆಂಕಿ ಸಂದರ್ಭ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ಬೆಂದುಹೋಗುವ ವಸ್ತುಗಳು, ಎಣ್ಣೆ, ಇಂಧನ, ಮನೆ, ಕಾಡು ಇಂತಹ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಕಾಳಪ್ಪ ಹಾಗೂ ತಂಡ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿತು. ಮುಖ್ಯ ಶಿಕ್ಷಕಿ ತಾಜ್ ತಂಗಮ್ಮ, ಶಿಕ್ಷಕ ವೃಂದದವರು ಇದ್ದರು.