*ಗೋಣಿಕೊಪ್ಪಲು, ಡಿ. 2: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ನಾಡ್ ಪುತ್ತರಿ ಕೋಲ್ ಮಂದ್ ತಾ. 13ಕ್ಕೆ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್‍ನಲ್ಲಿ ಇತ್ತೀಚೆಗೆ ನಡೆದ ಮೂರು ನಾಡಿನ ಪುತ್ತರಿ ಕೋಲ್ ಮಂದ್ ಪೂರ್ವಭಾವಿ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಬೊಟ್ಟಿಯತ್ ನಾಡ್, ಬೇರಳಿ ನಾಡ್ ಹಾಗೂ ಕುತ್ತ್ ನಾಡಿನ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು. ಡಿ. 13ಕ್ಕೆ ಸಾಂಪ್ರದಾಯಿಕ ಕೋಲ್ ಮಂದ್ ನಡೆಸಲು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ನಡೆಸಲು ತಿರ್ಮಾನ ಕೈಗೊಳ್ಳಲಾಯಿತು.
ಮೂರು ನಾಡಿನ ಸಾಮೂಹಿಕ ಪುತ್ತರಿ ಕೋಲಾಟದ ಬಳಿಕ ವಿವಿಧ ಸ್ಪರ್ಧೆ ನಡೆಯಲಿದೆ. ಕೋಲಾಟ್, ಉಮ್ಮತಾಟ್, ಬೊಳಕಾಟ್, ಪರೆಯ ಕಳಿ, ಕತ್ತಿಯಾಟ್, ಕಪ್ಪೆಯಾಟ್, ಎರವಾಟ್, ವಾಲಗತಾಟ್, ಹಾಗೂ ಪಾಟ್ ಪೈಪೆÇೀಟಿ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯಲ್ಲಿ ವಿವಿಧ ಮಂದ್ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸ್ಪರ್ಧಿಗಳು ಕಾರ್ಯಕ್ರಮ ದಂದು ಬೆಳಿಗ್ಗೆ 10.30ಕ್ಕೆ ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹು ದಾಗಿದೆ. ಹೆಚ್ಚಿನ ಮಾಹಿತಿಗೆ- 9448896141, 9448422371, 9880967573 ಸಂಪರ್ಕಿಸ ಬಹುದಾಗಿದೆ. ಬೊಟ್ಟಿಯತ್ ಮೂಂದ್ ನಾಡ್ ತಕ್ಕರಾದ ಅಡ್ಡಂಡ ಜಾಲಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇರಳಿನಾಡ್ ತಕ್ಕರಾದ ಮಳವಂಡ ಪ್ರಭು ಪೂಣಚ್ಚ, ಕುತ್ತ್‍ನಾಡ್ ತಕ್ಕರಾದ ಪಂದಿಮಾಡ ರಮೇಶ್ ಅಚ್ಚಪ್ಪ, ಕೈಮುಡಿಕೆ ಕಾರ್ಯದರ್ಶಿ ಮೂಕಚಂಡ ಅರುಣ್ ಅಪ್ಪಣ್ಣ, ಸಹ ಕಾರ್ಯದರ್ಶಿಗಳಾದ ತೀತಮಾಡ ವಾಸು ಗಣಪತಿ, ತೀತಿಮಾಡ ಗಾಂಧಿ ಗಣೇಶ್ ಸೇರಿದಂತೆ ಮೂರು ನಾಡಿನ ವಿವಿಧ ಗ್ರಾಮಗಳ ಊರು ತಕ್ಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.