*ಗೋಣಿಕೊಪ್ಪಲು, ಡಿ. 2: ಕಳೆದ 36 ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಪಾರ್ವತಿಯವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಇಲ್ಲಿನ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾರ್ವತಿಯವರನ್ನು ಸನ್ಮಾನಿಸಲಾಯಿತು.

ಸಮಿತಿ ಸದಸ್ಯ ಗುಮ್ಮಟ್ಟೀರ ಕಿಲನ್, ಕಚೇರಿ ಸಹಾಯಕ ಗೋವಿಂದ ಶೆಟ್ಟಿ, ಜಿಲ್ಲಾ ಬಿಜೆಪಿ ವರ್ತಕ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾರ್ಯದರ್ಶಿ ಲಾಲಾ ಭೀಮಯ್ಯ, ಕುಂಬೆಯಂಡ ಗಣೇಶ್, ತಾಲೂಕು ವರ್ತಕರ ಪ್ರಕೋಷ್ಟ ಅಧ್ಯಕ್ಷ ಚೆಪ್ಪುಡೀರ ಮಾಚಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ನೆಲ್ಲೀರ ಚಲನ್, ಆರ್.ಎಂ.ಸಿ. ಉಪಾಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ, ಸದಸ್ಯರುಗಳಾದ ಅಜ್ಜಿಕುಟ್ಟೀರ ಮುತ್ತಪ್ಪ, ಹೆಚ್.ಎನ್. ಮೋಹನ್‍ರಾಜ್, ಕಳ್ಳಂಗಡ ಬಾಲಕೃಷ್ಣ, ಮಾಚಿಮಂಡ ಸುವೀನ್ ಗಣಪತಿ, ಜಿಲ್ಲಂಡ ಕೆ. ಅಯ್ಯಪ್ಪ, ಕೊಟ್ಟುಕುಟ್ಟಡ ಭೀಮಣಿ, ಕಾರ್ಯದರ್ಶಿ ಶ್ರೀಧರ್ ಹಾಜರಿದ್ದರು.