ವೀರಾಜಪೇಟೆ, ಡಿ. 2: ಸಮಾಜದಲ್ಲಿ ನಾಗರಿಕರಿಗೆ ಲಭಿಸಿರುವ ಮೂಲಭೂತ ಹಕ್ಕುಗಳು ಶಾಲಾ ಮಕ್ಕಳಿಗೂ ಅನ್ವಯವಾಗಬೇಕು ಎಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಮಹಿಳಾ ಸಿಬ್ಬಂದಿ ಹೆಚ್.ಎಂ. ಶಿಲ್ಪ ಅಭಿಮತ ವ್ಯಕ್ತ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೂಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸರ್ಕಾರಿ ಪ್ರೌಢಶಾಲೆ ಅಮ್ಮತ್ತಿಯ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳು, ಹಬ್ಬ ಹಾಗೂ ಅರಿವು ಕಾರ್ಯಕ್ರಮ ಆಯೋಜನೆಗೊಂಡಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಿಲ್ಪ, ಇಂದು ನಾಗರಿಕ ಸಮಾಜಕ್ಕೆ ಸಂವಿಧಾನ ರಕ್ಷಣಾ ಹಕ್ಕು, ವಿಕಾಸದ ಹಕ್ಕು, ಬದುಕುವ ಹಕ್ಕು ಹೀಗೆ ಹಲವು ರೀತಿಯಲ್ಲಿ ಹಕ್ಕುಗಳನ್ನು ಮಕ್ಕಳಿಗೂ ಕಲ್ಪಿಸಿದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ವಿದ್ಯಾರ್ಥಿ ಪ್ರಮುಖರಾದ ನಿಸರ್ಗ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವನಂದಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರೂಬೇಷನರಿ ಪೊಲೀಸ್ ನಿರೀಕ್ಷಕ ರಸೊಲ್ ಸಾಬ್, ಶಿವನಗೌಡ ಪಾಟೀಲ್, ಮುಖ್ಯ ಸಿಬ್ಬಂದಿ ದೇವಯ್ಯ ಮೊದಲಾದವರು ಹಾಜರಿದ್ದರು.