ಮಡಿಕೇರಿ, ಡಿ. 2: ಮನುಷ್ಯ ಸಂಪತ್ತಿನ ಶೇ. 1 ರಷ್ಟನ್ನು ಸಮಾಜಕ್ಕೆ ದಾನ ಮಾಡುವ ಮೂಲಕ ಧರ್ಮ ಶಾಸ್ತ್ರ ಪರಿಪಾಲಿಸಿದರೆ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ರಾಷ್ಟ್ರಪತಿ ಪದಕ ವಿಜೇತ ನಿವೃತ್ತ ಡಿಐಜಿ ಅಮೆ ಸೀತಾರಾಮ್ ಹೇಳಿದರು.

ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ 17ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿತ ಸೀತಾರಾಮ್ ಅವರು ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಮನಸ್ಥಿತಿ ಇರಬೇಕು. ನಿವೃತ್ತಿ ನಂತರವೂ ಮನೆಯಲ್ಲಿ ಕೂರದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರೆ ಮನಸ್ಸು ಲವಲವಿಕೆಯಿಂದ ಆತ್ಮಸ್ಥೈರ್ಯ ಜೀವನ ಶೈಲಿ ಸಧೃಡವಾಗಿರುತ್ತದೆ ಎಂದರು.

ಕೊಡಗು ಗೌಡ ನಿವೃತ ನೌಕರರ ಸಂಘದಿಂದ ಹಿರಿಯ ಸದಸ್ಯರಿಗೆ ನೀಡುವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಕೃಷಿ ಅಧಿಕಾರಿ ಕೂಡಕಂಡಿ ಗಣಪತಿ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಅಧ್ಯಕ್ಷತೆ ವಹಿಸಿದ್ದ ಕೋರನ ಸಿ. ವಿಶ್ವನಾಥ ಮಾತನಾಡಿ, ಸಂಘದ ಏಳಿಗೆಗಾಗಿ ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದರು.

ವೇದಿಕೆಯಲ್ಲಿ ಸಂಘದಿಂದ ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವಕ-ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು. ಕೊಡಗು ಗೌಡ ನಿವೃತ್ತ ಸಂಘದ ಪದಾಧಿಕಾರಿ ಪರಿವಾರನ ಅಪ್ಪಾಜಿ, ಬೈಮನ ವಿಶ್ವನಾಥ, ಮೇಡತನ ದೇವÀಕಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಕ್ವಿಟ್ ಇಂಡಿಯಾ ಪ್ರಶಸ್ತಿ ಸ್ವೀಕರಿಸಿದ 96 ವರ್ಷದ ನಿವೃತ್ತ ಮುಖ್ಯೋಪಾ ಧ್ಯಾಯ ಕಟ್ರತನ ಬೆಳ್ಯಪ್ಪ ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಸೂದನ ನಾಣಯ್ಯ, ಪಡಿಕಲ್ ಡಬ್ಲ್ಯು. ಚಂಗಪ್ಪ, ಪಾಣತ್ತಲೆ ಸಿ. ಬಿದ್ದಪ್ಪ, ದಂಬೆಕೋಡಿ ಎಸ್. ಆನಂದ, ಪಟ್ಟಡ ಸಿ. ದೇವಯ್ಯ, ಸೂದನ ಎ. ಮೋಹಿನಿ, ತಳೂರು ಕಾಳಪ್ಪ, ಕುಯ್ಯಮುಡಿ ಕೆ. ವಸಂತ, ಚೆರಿಯಮನೆ ಪ್ರಮೋದ್, ಹೊಸೊಕ್ಲು ಟಿ. ಪೊನ್ನಪ್ಪ, ಕರ್ಣಯ್ಯನ ನಾಗೇಶ, ಅತ್ತೇಡಿ ಕೃಷ್ಣಪ್ಪ ಉಪಸ್ಥಿತರಿದ್ದರು. ಕೂಡಕಂಡಿ ಉಮಾದೇವಿ ಪ್ರಾರ್ಥಿಸಿ, ಉಪಾಧ್ಯಕ್ಷ ಕುದುಪಜೆ ಬೋಜಪ್ಪ ಸ್ವಾಗತಿಸಿದರು. ಖಜಾಂಚಿ ಪೊನ್ನಚ್ಚನ ಸೋಮಣ್ಣ ವಾರ್ಷಿಕ ಖರ್ಚಿನ ವಿವರ ನೀಡಿದರು. ಕುದುಪಜೆ ಶಾರದ ವರದಿ ವಾಚಿಸಿದರು. ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ ವಾರ್ಷಿಕ ವರದಿ ವಾಚಿಸಿ, ವಂದಿಸಿದರು.