ಗೋಣಿಕೊಪ್ಪ ವರದಿ, ಡಿ. 2: ಬಿ. ಶೆಟ್ಟಿಗೇರಿ ಗ್ರಾಮದ ನಾಮೇರ ಬೋಸ್ ಎಂಬವರ ಮನೆಯ ಸಮೀಪ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಪೊನ್ನಂಪೇಟೆ ಯ ಉರಗ ಪ್ರೇಮಿ ಆಲೆಮಾಡ ನವೀನ್ ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟರು. ಸುಮಾರು 14 ಅಡಿ ಉದ್ದವಿದ್ದ ಕಾಳಿಂಗ 22 ಕೆ.ಜಿ. ತೂಕವಿತ್ತು. ಜನರ ಸಹಕಾರದಲ್ಲಿ ಹಿಡಿದು ತಿತಿಮತಿ ಸಮೀಪದ ನಾಗರಹೊಳೆ ಉದ್ಯಾನವನಕ್ಕೆ ಬಿಡಲಾಯಿತು.

ಹಾವು ಸೆರೆಯಾದ ಸಂದರ್ಭ ಹಾವಿಗೆ ಹೆದರಿ ದೂರವಿದ್ದ ಸ್ಥಳೀಯರು ಹಾವಿನ ದೇಹ ಸ್ಪರ್ಶಿಸಿ ಕುಶಿಪಟ್ಟರು. ತಕ್ಷಣ ಸ್ಪಂದಿಸಿದ ಆಲೆಮಾಡ ನವೀನ್ ಅವರ ಕಾಳಜಿಗೆ ಪ್ರಶಂಸೆ ವ್ಯಕ್ತವಾಯಿತು.