ಸುಂಟಿಕೊಪ್ಪ, ನ. 30: ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆಯ ಕ್ರೀಡಾ ದಿನಾಚರಣೆಗೆ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಹಾಗೂ ದಾನಿ ನೀಲಮ್ಮ ಪೆಮ್ಮಯ್ಯ ಚಾಲನೆ ನೀಡಿದರು. ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಕ್ರೀಡಾ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡಿದ ಕುಮುದಾ ಧರ್ಮಪ್ಪ, ಶಿಸ್ತು ಬಹುಮುಖ್ಯ. ಅದನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹಾರೈಸಿದರು. ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ರಂಜಿನಿ, ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳು ಆಗುವದರ ಜೊತೆಗೆ ಆರೋಗ್ಯವಂತರಾಗಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ಬಂಗಾಳ ವಾರಿಯರ್ಸ್ ತಂಡದ ಪ್ರೋ ಕಬಡ್ಡಿ ಆಟಗಾರ ಅವಿನಾಶ್ ಕ್ರೀಡಾಕೂಟ ಉದ್ಘಾಟಿಸಿ ತಮ್ಮ ಸಾಧನೆಯ ಬಗ್ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಪಿಡಿಒ ಗುಳ್ಳಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುನೀತಾ, ಸದಸ್ಯ ಪ್ರಭಾಕರ್ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ವಹಿಸಿದ್ದರು. ಶಿಕ್ಷಕರಾದ ಪಾರ್ವತಿ, ನವೀನ್ ಕುಮಾರ್, ದಿವ್ಯ, ಮಾಲಾದೇವಿ, ಬಿಬಿನ್ ಕುಮಾರ್ ಉಪಸ್ಥಿತರಿದ್ದರು.