ಸೋಮವಾರಪೇಟೆ, ನ. 30: ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಮಟ್ಟದ ‘ಒಂದು ದೇಶ ಒಂದು ಸಂವಿಧಾನ’ ಅಭಿಯಾನ ನಡೆಯಿತು.
ನಿವೃತ್ತ ಯೋಧ ಎಂ.ಕೆ. ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವದು ಒಂದು ಶ್ರೇಷ್ಠವಾದ ಕರ್ತವ್ಯ. ಹಾಗಾಗಿ ಸೈನ್ಯದಲ್ಲಿ ಸೇರುವ ಅವಕಾಶವನ್ನು ಯುವ ಜನಾಂಗ ಕೈಚೆಲ್ಲಬಾರದು. ಆ ಮೂಲಕ ದೇಶ ಸೇವೆ ಮಾಡಲು ಎಲ್ಲರೂ ಮುಂದಾಗಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ. ಶ್ರೀಧರ ಮಾತನಾಡಿ, ದೇಶದ ಸಮಗ್ರತೆಯನ್ನು ಕಾಪಾಡುವದರ ಜತೆಗೆ ಸಂವಿಧಾನದ ಆಶಯಗಳನ್ನು ಈಡೇರಿಸಿದಾಗ ಮಾತ್ರ ಈ ಅಭಿಯಾನಕ್ಕೆ ಅರ್ಥ ಬರುತ್ತದೆ ಎಂದರು. ಕಾಲೇಜಿನ ಉಪನ್ಯಾಸಕರಾದ ರಾಜು, ಧನಲಕ್ಷ್ಮೀ, ಶೈಲಾ, ಕಚೇರಿ ಸಿಬ್ಬಂದಿಗಳಾದ ಜವರ, ರವಿ, ಧರ್ಮಪ್ಪ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ಭಾಷಣದಲ್ಲಿ ಪಾಲ್ಗೊಂಡಿದ್ದರು.