ಗೋಣಿಕೊಪ್ಪ ವರದಿ, ನ. 30: ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆಗೈದ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳನ್ನು ಇತ್ತೀಚೆಗೆ ಕಾಲೇಜು ವತಿಯಿಂದ ಗೌರವಿಸಲಾಯಿತು.

ತಾಲೂಕು ಮಟ್ಟದ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ, ಹ್ಯಾಮರ್ ಥ್ರೊ, ಡಿಸ್ಕಸ್ ಥ್ರೊ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಿಲನ್ ಮುತ್ತಣ್ಣ, ಡಿಸ್ಕಸ್ ಥ್ರೊ ಮತ್ತು ಹ್ಯಾಮರ್ ಥ್ರೊ ಸ್ಪರ್ಧೆಗಳಲ್ಲಿ ದ್ವಿತೀಯ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಟಿ.ಎಲ್. ಭುವನ್ ಬೋಪ್ಪಣ್ಣ, ತಾಲೂಕು ಮಟ್ಟದ ಅಥ್ಲೆಟಿಕ್ಸ್ 800 ಮೀಟರ್, 1,500 ಮೀಟರ್, ಗುಡ್ಡಗಾಡು ಓಟದಲ್ಲಿ ಪ್ರಥಮ, ಜಿಲ್ಲಾಮಟ್ಟದ ಗುಡ್ಡಗಾಡು ಓಟದಲ್ಲಿ ತೃತೀಯ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ, ಚೆಸ್‍ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಕೆ.ಟಿ. ಚೊಂದಮ್ಮ ಅವರುಗಳನ್ನು ಗೌರವಿಸಲಾಯಿತು.

ತಾಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ನೀಲಮ್ಮ, ತಾಲೂಕು ಮಟ್ಟದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪಿ.ಸಿ. ಕೋಯಲ್, ದ್ವಿತೀಯ ಸ್ಥಾನ ಪಡೆದ ಆಶಿಕಾ ಬೋಜಮ್ಮ, ಗುಡ್ಡಗಾಡು ಓಟದಲ್ಲಿ 4ನೇ ಸ್ಥಾನದ ಶಶಾಂಕ್ ಮಂದಣ್ಣ, ಜಿಲ್ಲಾಮಟ್ಟದ ಭಾರದ ಗುಂಡು ಎಸೆತದಲ್ಲಿ ಭಾಗವಹಿಸಿದ್ದ ಎಸ್.ಎಂ. ಚರಣ್, ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಿ.ಎಸ್. ಧ್ಯಾನ್ ಮೇದಪ್ಪ, ಫುಟ್ಬಾಲ್ ಕ್ರೀಡೆಯಲ್ಲಿ ಎನ್.ಎನ್. ಪ್ರಜ್ಞಾ ಬೋಜಮ್ಮ, ತಾಲೂಕು ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬಾಲಕರ ತಂಡ ರನ್ನರ್ ಆಫ್ ಪ್ರಶಸ್ತಿಗಳಿಸಿದ ತಂಡ, ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯ ರನ್ನರ್ ಆಫ್ ಬಾಲಕಿಯರ ತಂಡ, ಫುಟ್ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಬಾಲಕಿಯರ ತಂಡ, ರಾಜ್ಯಮಟ್ಟದ ಹ್ಯಾಂಡ್‍ಬಾಲ್ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ ಕೆ.ಎಸ್. ಯಶಸ್, ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದ ಜ್ಞಾನೇಶ್ ಅವರುಗಳು ಗೌರವ ಸ್ವೀಕರಿಸಿದರು.

ಈ ಸಂದರ್ಭ ಕೊಡವ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಚೆರಿಯಪಂಡ ರಾಕೇಶ್, ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್‍ಕುಮಾರ್ ಇದ್ದರು.