ನಾಪೋಕ್ಲು, ನ. 30: ಸಮೀಪದ ಕೋಕೇರಿ ಗ್ರಾಮದ ಚೇನಂಡ ನೀಲಮ್ಮ ಸೋಮಯ್ಯ ಅವರು ಬಿದ್ದಂಡ ಪೂವಮ್ಮ ದೇವಯ್ಯ ಸ್ಮಾರಕ ಪ್ರತಿಭಾ ಮಹಿಳಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೋಕೇರಿ ಗ್ರಾಮದ ಶ್ರೀ ಕಾವೇರಿ ಮಹಿಳಾ ಮಂಡಳಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ಚೆಯ್ಯಂಡಾಣೆ ವಿಎಸ್‍ಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿ ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದು ಪ್ರಸ್ತುತ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿದ್ದಾರೆ. ಬೇಂಗೂರು ಗ್ರಾಮದ ಕಲ್ಮಾಡಂಡ ಅಪ್ಪಣ್ಣ - ಪೊನ್ನು ದಂಪತಿಗಳ ಪುತ್ರಿಯಾಗಿರುವ ಇವರು ಕೋಕೇರಿ ಗ್ರಾಮದ ಚೇನಂಡ ಶಿವಾಜಿ ಸೋಮಯ್ಯ ಅವರ ಪತ್ನಿ.