ಮಡಿಕೇರಿ, ನ. 30: ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಯವರ ನೈಸರ್ಗಿಕ ವಿಕೋಪ ಪರಿಹಾರ ನಿಧಿಗೆ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಬುಧವಾರ ನಡೆದ ಆಡಳಿತ ಮಂಡಳಿ ಸಮಿತಿ ಸಭೆಯ ತೀರ್ಮಾನದಂತೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲಾಯಿತು.
ಸಭೆಯಲ್ಲಿ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷÀ ಅಂಬಿ ಕಾರ್ಯಪ್ಪ, ಉಪಾಧ್ಯಕ್ಷ ಅನಂತೇಶ್ವರ, ಸದಸ್ಯರುಗಳಾದ ಕಾಂಗೀರ ಸತೀಶ್, ಚೇನಂಡ ಗಿರೀಶ್ ಪೂಣಚ್ಚ, ಬೆಪ್ಪುರನ ಮೇದಪ್ಪ, ನಾರಾಯಣ ನಾಯ್ಕ, ನಿರ್ಮಲ ನಂಜಪ್ಪ, ಹೇಮಲತ ನಂಜಪ್ಪ, ಎ.ಬಿ. ತಮ್ಮಯ್ಯ, ವಾಂಚಿರ ಜಯ ನಂಜಪ್ಪ, ಕೆ.ಕೆ. ದೇವಪ್ಪ, ಡಿ.ಎನ್. ಅನಿಲ್ ಕುಮಾರ್, ಎಂ.ಕೆ. ಕುಟ್ಟಪ್ಪ ಹಾಗೂ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ, ಸಿಬ್ಬಂದಿಗಳು ಇತರರು ಇದ್ದರು.