ಮಡಿಕೇರಿ, ನ. 29: ಪ್ರವಾದಿ ಮಹಮ್ಮದ್ ಪೈಗಂಬರ್‍ರ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ನಾಪೆÇೀಕ್ಲು ನಾಲ್ಕು ನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ಡಿ. 1 ರಂದು ‘ಶಾಂತಿಯ ಸಂದೇಶ ರ್ಯಾಲಿ ಹಾಗೂ ಸಾರ್ವಜನಿಕ ಸೌಹಾರ್ದ ಸಮ್ಮೇಳನ’ ನಡೆಯಲಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಪಿ.ಎಂ. ಖಾಸಿಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈಗಂಬರ್ ಅವರು ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು, ಸಮಾನತೆಯನ್ನು ಬೋಧಿಸಿದ್ದಾರೆ ಎಂದು ತಿಳಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿ, ಡಿ. 1 ರಂದು ಬೆಳಗ್ಗೆ 10 ಗಂಟೆಗೆ ನಾಪೋಕ್ಲು ಹಳೇ ತಾಲೂಕಿನಿಂದ ಸಂದೇಶ ರ್ಯಾಲಿ ಆರಂಭಗೊಂಡು ನಾಪೆÇೀಕ್ಲು ಮಾರುಕಟ್ಟೆ ಆವರಣದವರೆಗೆ ನಡೆಯಲಿದ್ದು, ಬಳಿಕ ಮಧ್ಯಾಹ್ನ 1.30ಕ್ಕೆ ಸಾರ್ವಜನಿಕ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.

ಸೌಹಾರ್ದ ಸಮ್ಮೆಳನವನ್ನು ಬಹು ಅಲ್ ಹಾಜ್ ಅಬ್ದುಲ್ಲ ಫೈಜಿ ಉದ್ಘಾಟಿಸಲಿದ್ದು, ಮುಖ್ಯ ಭಾಷಣಕಾರರಾಗಿ ಮಾಜಿ ಸಚಿವ ಯಂ.ಸಿ. ನಾಣಯ್ಯ, ಕೇರಳದ ಮಲಪ್ಪುರಂನ ಆರ್ಜಿತ ಹಿಂದೂ ಸಮಾಜದ ಪರಮಾಚಾರ್ಯ ಡಾ. ಆತ್ಮದಾಸ್, ಬೆಂಗಳೂರು ಉಚ್ಚ ನ್ಯಾಯಾಲಯದ ವಕೀಲ ಅನಂತ್ ನಾಯಕ್, ಧಾರ್ಮಿಕ ಪಂಡಿತರಾದ ಅಬ್ಬುಬಕರ್ ಸಿದ್ದೀಖ್ ಮೊಂಟುಗೋಳಿ, ಬೆಂಗಳೂರಿನ ಪತ್ರಕರ್ತ ರಾ. ಚಿಂತನ, ಮಂಗಳೂರಿನ ಧಾರ್ಮಿಕ ಪಂಡಿತ ಅನೀಸ್ ಕೌಸರಿ, ವೀರಾಜಪೇಟೆಯ ರೆವರೆಂಡ್ ಫಾದರ್ ಮುದಲೈ ಮುತ್ತು ಭಾಗವಹಿಸಲಿದ್ದಾರೆಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ನಾಪೋಕ್ಲು ಗ್ರಾ. ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕುಬ್, ಮಡಿಕೇರಿ ಆರ್.ಆರ್. ಆಸ್ಪತ್ರೆಯ ಮಕ್ಕಳ ತಜ್ಞ ಡಾ. ನವೀನ್ ಕುಮಾರ್, ಕೊಟ್ಟಮುಡಿ ಮರ್ಕಝುಲ್ ಹಿದಾಯದ ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸನ್ಮಾನ-ಸಮ್ಮೇಳನದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಅಧ್ಯಾಪಕ ಉಮ್ಮರ್ ಮಾಸ್ಟರ್, ನಾಪೋಕ್ಲುವಿನ ಹಿರಿಯ ಸಹಕಾರಿ ಧುರೀಣ ಬೊಪ್ಪೇರ ಕಾವೇರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಕುಪ್ಪೋಡಂಡ ಹಂಸ, ದಾನಿ ಹೆಚ್.ಎಂ. ಅಬ್ದುಲ್ಲಾ ಹಾಜಿ, ಸೆಂಟ್ರಲ್ ಎಕ್ಸೈಸ್‍ನ ನಿವೃತ್ತ ಉಪ ಆಯುಕ್ತ ಎಂ.ಬಿ. ಮಹಮೂದ್ (ಮಮ್ಮು) ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಂ.ಎ. ನಾಸಿರ್ ಮಕ್ಕಿ, ಕಾರ್ಯದರ್ಶಿ ಹಮೀದ್, ಸದಸ್ಯರುಗಳಾದ ಎಂ.ಎ. ಮನ್ಸೂರ್ ಅಲಿ, ಮೊಯ್ದು ಉಪಸ್ಥಿತರಿದ್ದರು.