ಕನ್ನಡ ಗೀತಾ ಸ್ಪರ್ಧೆ
ತಾಲೂಕು ಬಾಲಭವನ ಸಮಿತಿ, ಶಿಶು ಅಭಿವೃದ್ದಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ 5 ರಿಂದ 16 ವರ್ಷದ ಮಕ್ಕಳಿಗೆ ಕನ್ನಡ ಗೀತಾ ಸ್ಪರ್ಧೆ ನಡೆಯಲಿದೆ. 5 ರಿಂದ 8 ವರ್ಷದ 9 ರಿಂದ 12 ವರ್ಷ 13 ರಿಂದ 16 ವರ್ಷದ ಮಕ್ಕಳು 3 ಹಂತದಲ್ಲಿ ಸ್ಪರ್ಧೆಗೆ ಭಾಗವಹಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.
ವೃತ್ತಿ ಶಿಕ್ಷಣ ಕಲಿಕೋತ್ಸವ ಕಾರ್ಯಕ್ರಮ
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ‘ವೃತ್ತಿ ಶಿಕ್ಷಣ ಕಲಿಕೋತ್ಸವ’ ಕಾರ್ಯಕ್ರಮ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ತಿಳಿಸಿದ್ದಾರೆ.
ತಾ.ಪಂ.ಕೆ.ಡಿ.ಪಿ. ಸಭೆ
ಮಡಿಕೇರಿ ತಾಲೂಕು ಪಂಚಾಯತ್ ಮಾಸಿಕ ಕೆ.ಡಿ.ಪಿ. ಸಭೆಯು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10.30 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ತಾ.ಪಂ. ಇಒ ಲಕ್ಷ್ಮಿ ತಿಳಿಸಿದ್ದಾರೆ.